ಬೆಂಗಳೂರು: ಮಳೆ ನಿಂತರೂ ಮಳೆಯಿಂದ ಆದ ಅವಾಂತರಗಳು ಒಂದೆರಡಲ್ಲ. ಇಂದು ಬೆಳಗ್ಗೆ ಕೆಲಸಕ್ಕೆ ಹೋಗಬೇಕಾಗಿದ್ದ ಜನರು ರಸ್ತೆಗಳ ಮೇಲೆ ತುಂಬಿದ ನೀರಿನಲ್ಲೆ ಪರದಾಡುತ್ತ ಹೋಗುವ ದೃಶ್ಯಗಳು ನಗರಾದ್ಯಂತ ಕಂಡುಬಂತು. ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಕೆರೆಯಂತಾಗಿದೆ. ಮಾರತಹಳ್ಳಿ ಔಟ್ ರಿಂಗ್ ರೋಡ್ ಇಕೋ ಸ್ಪೇಸ್ ಬಳಿ ರಸ್ತೆ ನೀರಿನಿಂದ ತುಂಬಿ ಹೋಗಿದ್ದ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಇಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇನ್ನೊಂದು ಕಡೆ ಸಜಾಪುರ ರಸ್ತೆಯ ರೈ ಲೇಔಟ್ ಮತ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಅಗ್ನಿಶಾಮಕದಳ ಸಿಬ್ಬಂದಿ ಬೋಟ್ ಬಳಸಿ ಜನರನ್ನು ರಕ್ಷಿಸುತ್ತಿರುವ ದೃಶ್ಯಗಳು ಕಂಡು ಬಂತು. ಸಂಪೂರ್ಣವಾಗಿ ಲೇಔಟ್ ಜಲದಿಗ್ಬಂಧನಕ್ಕೆ ಒಳಗಾಗಿದ್ದು ಜನರು ತಮ್ಮ ಮನೆಗಳಿಂದ ಹೊರ ಬರದೆ ಮನೆಯಲ್ಲಿಯೇ ಇರುವ ಪರಿಸ್ಥಿತಿ ಬಂದಿದೆ.
ರಾತ್ರಿ ಮಳೆಗೆ ತುಂಬಿ ಹರಿಯುತ್ತಿರುವ ಮಡಿವಾಳ ಕೆರೆ. ಮಡಿವಾಳ ಕೆರೆ ತುಂಬಿ ಹರಿಯುತ್ತಿರುವ ದಿಂದಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಕೆರೆ ಉಕ್ಕಿ ರಾಜ್ಯ ಕಾಲುವೆ ಮೂಲಕ ನೀರು ಹೊರಬರುತ್ತಿದ್ದವು. ಹೊರಬಂದ ನೀರು ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದ್ದರಿಂದ ಸುಲಭವಾದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
05/09/2022 01:30 pm