ವರದಿ : ಗಣೇಶ್ ಹೆಗಡೆ
ಬೆಂಗಳೂರು -ನಾಡಪ್ರಭು ಕೆಂಪೇಗೌಡ ಲೇಔಟ್(NPKL) ಗೋಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ದಿನಕ್ಕೊಂದು ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಇದೀಗ ನಿನ್ನೆ ರಾತ್ರಿ ಸುರಿದ ಮಳೆ (Rain) ಹೊಸ ಸಮಸ್ಯೆಯನ್ನು ತಂದೊಡ್ಡಿದೆ. ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಕಾಲುವೆ, ಕಿರು ಸೇತುವೆ ಮತ್ತು ಚರಂಡಿ ಕಾಮಗಾರಿಗಳು ಪೂರ್ಣಗೊಳ್ಳದೆ ಮಳೆ ನೀರು ನುಗ್ಗಿ ಬಡಾವಣೆ ಕೆಲವೆಡೆ ನೀರು ನಿಂತು ಕೆರೆಯಂತಾಗಿದೆ.
ಕೆಂಪೇಗೌಡ ಬಡಾವಣೆಯಲ್ಲಿ 29 ಕಿ.ಮೀ. ರಾಜಕಾಲುವೆ ನಿರ್ಮಾಣಕ್ಕೆ ಯೋಜಿಸಲಾಗಿದ್ದು ಈಗಾಗಲೇ 24 ಕಿ.ಮೀ ಕಾಮಗಾರಿ ಮುಗಿದಿದೆ. ಆದರೆ, ಕೆಲವೆಡೆ ಭೂವಿವಾದದಿಂದ ಭೂಸ್ವಾಧೀನ ಮಾಡಿಕೊಳ್ಳದೇ ಇರುವ ಕಾರಣ ರಾಜಕಾಲುವೆ ಕಾಮಗಾರಿ ಮುಂದುವರೆದಿಲ್ಲ.
ಹಾಗೆಯೇ ಇಡೀ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 62 ರಿಂದ 65 ಕಿರು ಸೇತುವೆಗಳ ಪೈಕಿ ಕೇವಲ 24 ರಿಂದ 32 ಕಿರು ಸೇತುವೆಗಳು ಪೂರ್ಣಗೊಂಡಿದ್ದು ಇನ್ನೂ 37 ಕಿರು ಸೇತುವೆಗಳ ಕಾಮಗಾರಿ ಬಾಕಿ ಉಳಿದಿದೆ. ಬಡಾವಣೆಯ ಹಲವು ಚರಂಡಿಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಬಹುತೇಕ ಚರಂಡಿಗಳ ಅರ್ಧ ಮಾತ್ರ ಆಗಿದ್ದು ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಿದೆ.
Kshetra Samachara
18/05/2022 10:49 pm