ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಬೆಳಗ್ಗೆ ಬಿಸಿಲು ಸಂಜೆಯಾದರೆ ಮಳೆ

ಬೆಂಗಳೂರು: ಬೆಂಗಳೂರಿನ ಜನ ಕೆಲವು ದಿನಗಳಿಂದ ಮಧ್ಯಾಹ್ನ ಬಿಸಿಲಿನಿಂದ ಬೇಸತ್ತು ಹೋದರೆ ಸಂಜೆ ಆಗುತ್ತಿದ್ದಂತೆ ಬೆಂಗಳೂರು ಕೂಲ್ ಕೂಲ್ ಆಗಿ ಬಿಡುತ್ತದೆ. ಇಂದು ಸಂಜೆ ಕೂಡ ನಗರಕ್ಕೆ ಎಂಟ್ರಿಕೊಟ್ಟಿರುವ ಮಳೆರಾಯ ನಗರವನ್ನು ಕೂಲ್ ಕೂಲ್ ಮಾಡುವ ಕೆಲಸದಲ್ಲಿ ನಿರತವಾಗಿದ್ದಾನೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಎಚ್ಎಸ್ಆರ್ ಲೇಔಟ್, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಡಿವಾಳ, ಜೆಪಿ ನಗರ, ಬನಶಂಕರಿ, ಆರ್‌ಟಿ ನಗರ, ಶಾಂತಿ ನಗರ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ದ್ವಿಚಕ್ರವಾಹನ ಸವಾರರು ಕಂಪನಿ, ಆಫೀಸ್‌ನಿಂದ ಮನೆಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
Kshetra Samachara

Kshetra Samachara

16/05/2022 09:14 pm

Cinque Terre

2.61 K

Cinque Terre

1

ಸಂಬಂಧಿತ ಸುದ್ದಿ