ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಕಾಡಾನೆ ದಾಳಿಗೆ ಕುರಿ ಮೇಯಿಸುತ್ತಿದ್ದ ರೈತ ಬಲಿ‌

ವರದಿ: ಹರೀಶ್ ಗೌತಮನಂದ

ಆನೇಕಲ್: ಹೊಲದಲ್ಲಿ ರೈತ ಕುರಿಗಳನ್ನು ಮೇಯಿಸುತ್ತಿರುವಾಗ ಕಾಡಾನೆ ದಾಳಿಯಿಂದಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕರ್ನಾಟಕದ ಗಡಿಭಾಗ ಅಂಚೆಟ್ಟಿ ಗ್ರಾಮದ ಬಳಿ ನಡೆದಿದೆ. ಕಣ್ಣಿಯಪ್ಪನ್ ಮೃತಪಟ್ಟ ದುರ್ದೈವಿ.

ಇನ್ನು, ಜ.24ರಂದು ಕಟ್ಟಡ ಕೆಲಸಕ್ಕೆ ಹೋಗುವಾಗ ಕಾಡಾನೆ ದಾಳಿಗೆ ಸಿಲುಕಿ ಶಂಕರಮ್ಮ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾರುಣ ಸಾವಿನ ಘಟನೆ ಮರುಕಳಿಸಿದೆ.

ಎಂದಿನಂತೆ ಈ ರೈತ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಆಗ ಮರೆಯಲ್ಲಿದ್ದ ಕಾಡಾನೆ ಏಕಾಏಕಿ ರೈತನ ಮೇಲೆ ಎರಗಿದೆ! ಪರಿಣಾಮ ಸ್ಥಳದಲ್ಲೇ ಬಡಪಾಯಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

30/01/2022 10:15 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ