ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಳೆ ಪರಿಣಾಮ ಟರ್ಮಿನಲ್ ಬಳಿ ಸಮಸ್ಯೆ

*# ದೇವನಹಳ್ಳಿ:-*

ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮುಂಬಾಗ ಮಳೆ ನೀರು ನಿಂತು ಅರ್ದಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಗಿತ್ತು. ನೆನ್ನೆ ರಾತ್ರಿ 8ಗಂಟೆಯಿಂದ 8-30ರ ಸುಮಾರಿಗೆ ಟರ್ಮಿನಲ್ ಬಳಿ ನೀರು ನಿಂತಿರುವ ಬಗ್ಗೆ ಪ್ರಯಾಣಿಕರೊಬ್ಬರು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ‌ ಜಾಲತಾಣಗಳಲ್ಲಿ ಹರಿದಾಡ್ತಿದೆ..

ಅರೈವಲ್ ನಂತರ (ನಿರ್ಗಮನದ)ದಿನ ಪ್ರಯಾಣಿಕರು ಕ್ಯಾಬ್ ಮೂಲಕ ತೆರಳಬೇಕಾದರೆ ಕಾರ್ ಪಿಕಪ್ ಮತ್ತು ಡ್ರಾಪ್ ಮಾಡುವ ರಸ್ತೆಯಲ್ಲಿ ನೀರು ನಿಂತು ತೊಂದರೆ ಉಂಟಾಗಿತ್ತು. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ವಿಮಾನ ನಿಲ್ದಾಣದ ಸುತ್ತಲೂ ಬಾರಿ ಮಳೆಯಾಗಿದ್ದ ಏರ್ಪೋರ್ಟ್ನಲ್ಲು ಭಾರಿ ಮಳೆಯಿಂದ ಸಮಸ್ಯೆಯಾಗಿತ್ತು.

ಜೋರು ಮಳೆ ಬಂದು ಸ್ವಲ್ಪ ಸಮಸ್ಯೆಯಾಗಿತ್ತು. ಅರ್ದಗಂಟೆಯಲ್ಲೆ ನೀರನ್ನು ಖಾಲಿ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯ್ತು ಎಂದು KIA ಮೂಲಗಳು ತಿಳಿಸಿವೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : PublicNext Desk
Kshetra Samachara

Kshetra Samachara

06/09/2022 12:54 pm

Cinque Terre

1.6 K

Cinque Terre

0

ಸಂಬಂಧಿತ ಸುದ್ದಿ