ಬೆಂಗಳೂರು: ನಾಳೆ ಐತಿಹಾಸಿಕ ಟ್ಯಾನರಿ ರಸ್ತೆ ಗಣೇಶ ಮೆರವಣಿಗೆ ಪೂರ್ವಭಾವಿಯಗಿ ಪೊಲೀಸರು ಬಂದೋ ಬಸ್ತ್ ಮಾಡಿಕೊಂಡಿದ್ದಾರೆ. ಬಂದೋಬಸ್ತ್ ಹಿನ್ನೆಲೆ ಇಂದು ಟ್ಯಾನರಿ ರಸ್ತೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಮುಖ ರಸ್ತೆಯಲ್ಲಿ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಮುಖ್ಯವಾಗಿ ನಾಗವಾರ ಜಂಕ್ಷನ್‌ನಿಂದ ಕುಂಬಾರ ವೃತ್ತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ರಶಾದ್ ನಗರ, ಉಮರ್ ನಗರ, ಗೋವಿಂದಾಪುರ ಗ್ರಾಮ ಮತ್ತು ನಾಗವಾರ ಗ್ರಾಮಗಳಲ್ಲಿ ಖಾಕಿ ಬೂಟ್ ಸದ್ದು ಜೋರಾಗಿತ್ತು.
ಗಣಪತಿ ಮೆರವಣಿಗೆ ವೇಳೆ ಗಲಾಟೆಯಾಗದಂತೆ 300ಕ್ಕೂ ಹೆಚ್ಚು ಪೊಲೀಸರಿಂದ ರೂಟ್ ಮಾರ್ಚ್ ನಡೆಸಿದ್ರು. ರೂಟ್ ಮಾರ್ಚ್‌ನಲ್ಲಿ ಆರ್‌ಎಎಫ್ ,ಕೆಎಸ್‌ಆರ್‌ಪಿ, ಸಿಎಆರ್ ಪೊಲೀಸ್ರು ನಿಯೋಜನೆಯಾಗಿದ್ರು.
PublicNext
03/09/2022 10:59 pm