ಬೆಂಗಳೂರು: ಭ್ರಷ್ಟರ ಬೇಟೆಯಾಡೋ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಸಿಬ್ಬಂದಿ ಕೊರತೆ ಉಲ್ಬಣವಾಗಿದೆ. ಈ ಸಂಬಂಧ ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಮಂಜೂರಾತಿ ಕೋರಿ ಪ್ರಸ್ತಾವನೆ ಸಲ್ಲಿಸಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಈ ಬಗ್ಗೆ ಒಲವು ತೋರಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಬಿಡಿಎ, ಬಿಬಿಎಂಪಿ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಎಸಿಬಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿ ಸದ್ದು ಮಾಡಿದೆ. ಈ ಮಧ್ಯೆ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಾಗಿದ್ದು,ಅಗತ್ಯಕ್ಕೆ ಅನುಗುಣವಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಪರಿಣಾಮ ತ್ವರಿತಗತಿಯಲ್ಲಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬವಾಗುತ್ತಿದೆ.
ಈ ಕಾರಣಕ್ಕೆ 140 ಅಧಿಕಾರಿ, ಸಿಬ್ಬಂದಿಗೆ ಮಂಜೂರಾತಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇದರಿಂದ ಅಧಿಕಾರಿ ವರ್ಗ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ .
ಲೋಕಾಯುಕ್ತಕ್ಕೆ ಹೋಲಿಸಿದ್ರೆ ಎಸಿಬಿಯಲ್ಲಿ ಅರ್ಧದಷ್ಟು ಸಿಬ್ಬಂದಿ ಕೊರತೆ ಕಾಣ್ತಿದೆ. ಲೋಕಾಯುಕ್ತದಲ್ಲಿ 747 ಅಧಿಕಾರಿ, ಸಿಬ್ಬಂದಿಯಿದ್ರೆ.ಎಸಿಬಿಯಲ್ಲಿ ಇರೋದು ಕೇವಲ 447 ಅಧಿಕಾರಿ ಸಿಬ್ಬಂದಿ ಮಾತ್ರ. ಇನ್ನೂ ಲೋಕಾಯುಕ್ತಕ್ಕೆ ಪಿಟಿಷನ್ ಫೈಲ್ ಮತ್ತು ರಿಸೀವ್ ಮಾಡುವ ಪವರ್ ಅಷ್ಟೇ ಇದೆ. ರೇಡ್ ಮಾಡುವ ಪವರ್ ಲೋಕಾಯುಕ್ತಕ್ಕೆ ಇಲ್ಲ. ಆದ್ರೆ ಎಸಿಬಿಗೆ ರೇಡ್ ಮಾಡುವ ಪವರ್ ಇದ್ರೂ ಎಸಿಬಿ ಬಲ ಹೆಚ್ಚಿಸಲು ರಾಜ್ಯ ಸರ್ಕಾರ ಮೀನಾ ಮೇಷ ಏಣಿಸುತ್ತಿದೆ.
ಕೇವಲ ಸಿಬ್ಬಂದಿ ಕೊರತೆಯಷ್ಟೇ ಎಸಿಬಿಯಲ್ಲಿ ಇಲ್ಲ ಸುಸಜ್ಜಿತ ಕಟ್ಟಡ ಕೂಡ ಎಸಿಬಿ ಇಲಾಖೆಗಿಲ್ಲ. ಖನಿಜಭವನ ಕಟ್ಟಡದ ಇಕ್ಕಟ್ಟಿನ ಜಾಗದಲ್ಲೇ ಎಸಿಬಿ ಕಾರ್ಯ ನಿರ್ವಹಿಸುತ್ತಿದೆ.
ಎಸಿಬಿ, ಡಿವೈಎಸ್ಪಿ 1, ಪಿಐ 2, ಎಸ್ಐಐ 51, ಸಿಎಚ್ ಸಿ 79, ಸಿಪಿಸಿ 7 ಸೇರಿದಂತೆ ಒಟ್ಟು 140 ಹುದ್ದೆಗಳು ಹೊಸದಾಗಿ ಸೃಷ್ಟಿಸುವಂತೆ ಪ್ರಸ್ತಾವನೆಯಲ್ಲಿ ಮನವಿ ಮಾಡಿದ್ದಾರೆ.
ಎಸಿಬಿಗೆ ಪ್ರತಿವರ್ಷ 1500 ರಿಂದ 2 ಸಾವಿರ ದೂರುಗಳು ದಾಖಾಲಾಗುತ್ತಿದ್ದು,ಬೆಂಗಳೂರು ನಗರ ಎಸಿಬಿ ವಿಭಾಗದಲ್ಲಿ 35 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನೂ ಎಸಿಬಿ ಮತ್ತು ಲೋಕಾಯುಕ್ತದ ಬಲಾಬಲನೋಡುವುದಾದ್ರೆ.
ಎಸಿಬಿ ಲೋಕಾಯುಕ್ತ
ಎಡಿಜಿಪಿ 1 1
ಐಜಿಪಿ- 1 1
ಎಸ್ಪಿ 10 23
ಡಿವೈಎಸ್ಪಿ 35 43
ಪಿಐ- 75 90
ಪಿಎಸ್ಐ 0 13
ಎಸ್ಐಐ 0 04
ಸಿಎಚ್ ಸಿ 50 145
ಸಿಪಿಸಿ- 150 234
ಚಾಲಕರು 81 148
ಒಟ್ಟು 447 747
PublicNext
26/03/2022 05:47 pm