ಬೆಂಗಳೂರು: ಮತ್ತದೇ ಹಳೆ ಚಾಳಿ ಮುಂದುವರೆಸಿದ್ರಾ ಟೋಯಿಂಗ್ ಸಿಬ್ಬಂದಿ ಅನ್ನೋ ಪ್ರಶ್ನೆ ಕಾಡ್ತಿದೆ. ಯಾಕಂದ್ರೆ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ.
ಅನೌನ್ಸ್ ಮಾಡದೆ ಗಾಡಿ ಟೋಯಿಂಗ್ ಮಾಡ್ತಿರೋ ಸಿಬ್ಬಂದಿಯಿಂದ ವ್ಯಕ್ತಿ ಪರದಾಟ ನಡೆಸ್ತಿರೋ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.ಅನೌನ್ಸ್ ಮಾಡದೆ ಗಾಡಿ ತೆಗೆದುಕೊಂಡು ಹೋಗ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ಇಂದಿರಾನಗರದಲ್ಲಿ ನಡೆದ ಈ ಘಟನೆಯ ವೀಡಿಯೋ ಮಾಡಿ, ಫೇಸ್ ಬುಕ್ ನಲ್ಲಿ ಸಾರ್ವಜನಿಕರು ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
29/01/2022 12:49 pm