ಬೆಂಗಳೂರು : ಐತಿಹಾಸಿಕ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಭದ್ರತೆ ಹೆಚ್ಚಿದೆ. ನಗರದಲ್ಲಿ ಉಗ್ರರ ಕರಿನೆರಳು ಆವರಿಸಿಕೊಂಡ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಕಣ್ಗಾವಲು ಹೆಚ್ಚಾಗಿದೆ. ಮುಖ್ಯವಾಗಿ ಏರ್ ಪೋರ್ಟ್, ರೈಲ್ವೇ ನಿಲ್ದಾಣ ಮೆಟ್ರೋ ಸ್ಟೇಷನ್ ಹಾಗೂ ಬಸ್ ನಿಲ್ದಾಣದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಇಂದಿನಿಂದಲೇ ಭದ್ರತೆ ಹೆಚ್ಚಿಸಿರೋ ಪೊಲೀಸರು ಶ್ವಾನದಳ ಹಾಗೂ ಬಾಂಬ್ ಡಿಟೆಕ್ಟಿವ್ ಸ್ಕ್ವಾಡ್ ನಿಂದ ತಪಾಸಣೆ ನಡೆಸಿದ್ದಾರೆ. ಇದಿಷ್ಟೇ ಅಲ್ಲದೆ ಹೋಟೆಲ್, ಲಾಡ್ಜ್ ಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು ಹೊರಗಿನಿಂದ ಬಂದವರ ಮಾಹಿತಿ ಕಲೆಹಾಕುತ್ತಿದ್ದಾರೆ.
Kshetra Samachara
24/01/2022 10:20 pm