ದೇವನಹಳ್ಳಿ: ಯುದ್ಧಪೀಡಿತ ಉಕ್ರೇನ್‌ನಿಂದ ಸಾವಿರಾರು ಜನ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಅಪರೇಷನ್ ಗಂಗಾ ಹೆಸರಿನಲ್ಲಿ ಭಾರತಕ್ಕೆ ಕರೆತರುತ್ತಿದೆ..
ಇದರ ಭಾಗವಾಗಿ ಇಂದು ಕರ್ನಾಟಕ ಮೂಲದ ಐದು ಜನ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಉಕ್ರೇನ್‌ನ ಗಡಿಗಳಿಗೆ ತೆರಳಿ ಅಲ್ಲಿಂದ ವಿಮಾನಗಳ ಮೂಲಕ ನಿನ್ನೆ ಮುಂಬೈಗೆ ಬಂದು ಅಲ್ಲಿಂದ ಐದು ಜನ ವಿದ್ಯಾರ್ಥಿಗಳು ಇಂದು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಮುಂಬೈನಿಂದ ಬಂದ ಕೆ.ಆರ್ ಪುರದ ಆಕಾಂಕ್ಷ ಹಾಗೂ ಶೊಯೆಬ್ KIAಗೆ ಆಗಮಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು. ಇಬ್ಬರು ಕೀವ್ ಪ್ರಾಂತ್ಯದಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದು, ರುಮೇನಿಯಾ ಗಡಿ ತಲುಪಲು ನಾಲ್ಕು ದಿನ ತೆಗೆದುಕೊಂಡಿದ್ದರು.
ಸುರಕ್ಷಿತವಾಗಿ ಮುಂಬೈ ಏರ್‌ಪೋರ್ಟ್ ತಲುಪಿ, ಅಲ್ಲಿಂದ ದೇವನಹಳ್ಳಿಗೆ ಬಂದ ವಿದ್ಯಾರ್ಥಿಗಳನ್ನು ಪೋಷಕರು ಖುಷಿಯಿಂದ ಬರ ಮಾಡಿಕೊಂಡಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ಮೂಲದವರು ಕ್ಷೇಮವಾಗಿ ಭಾರತ ತಲುಪಿ ಎಂಬ ಆಶಯ ವ್ಯಕ್ತಪಡಿಸಿದರು..
Kshetra Samachara
03/03/2022 08:39 pm