ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಯುಕ್ರೇನ್ ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್

ದೇವನಹಳ್ಳಿ: ಕಳೆದ ಒಂದು ವಾರದಿಂದ ಉಕ್ರೇನ್ ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಯುದ್ಧಾತಂಕದ ಉಕ್ರೇನ್ ನಿಂ ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ನೆನ್ನೆ ದೆಹಲಿಗೆ ಬಂದಿದ್ದ 6ಜನರಲ್ಲಿ ಐದು ಜನ ಬೆಂಗಳೂರಿಗೆ ಬಂದಿದ್ದಾರೆ.

ಒಬ್ಬ ಹೈದರಾಬಾದ್ ನಲ್ಲಿ ಇಳಿದುಕೊಂಡರೆ ಉಳಿದ ಐದು ಜನ‌ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು..

ಬೆಂಗಳೂರು ಗ್ರಾಮಾಂತರ ನೆಲಮಂಗಲದ ಭಾವನಾ ರಾಜಣ್ಣ, ಬೆಂಗಳೂರಿನ ಆಫ್ನಾ ಸಬೀನಾ,

ಆರ್ಯನ್ ರಾವತ್, ಬೆಂಗಳೂರಿನ ಕುರುಬರಹಳ್ಳಿಯ ಧನಂಜಯ್.ಎ ಮತ್ತು ಮಹ್ಮದ್ ಫೈಸಲ್ ಹುಸೇನ್ ನಗರಕ್ಕೆ ಆಗಮಿಸಿದರು.. ಮಕ್ಕಳನ್ನು ಬರಮಾಡಿಕೊಂಡು ಖುಷಿಯಾದರು. ಕೆಲವರು ಆನಂದಭಾಷ್ಟ ಸುರಿಸಿ ಸಮಾಧಾನಕೊಂಡರು..

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಮತ್ತು ಪೋಷಕರು ತಾಯ್ನಾಡಿಗೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು..

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : Shivu K
PublicNext

PublicNext

02/03/2022 06:58 pm

Cinque Terre

29.35 K

Cinque Terre

3