ದೊಡ್ಡಬಳ್ಳಾಪುರ : ಪಂಚಾಯತ್ ನೀರು ಬಿಡುವ ವಿಚಾರದಲ್ಲಿ ಜಾತಿ ತಾರತಮ್ಯ ಇದ್ದು, ಸವರ್ಣಿಯರ ಕೇರಿಗೆ ಬರುವ ನೀರು ದಲಿತರ ಕೇರಿಗೆ ಬರುತ್ತಿರಲಿಲ್ಲ. ಈ ಬಗ್ಗೆ ದಲಿತರ ಮಹಿಳೆಯರು ನಡೆಸಿದ ಪ್ರತಿಭಟನೆಯನ್ನ ಪಬ್ಲಿಕ್ ನೆಕ್ಸ್ಟ್ ನಲ್ಲಿ ಪ್ರಸಾರ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ದಲಿತರ ನೀರಿನ ಬಣವೆಗೆ ಬ್ರೇಕ್ ಹಾಕಿದ್ರು.
ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ನೀರು ಬಿಡುವ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿತ್ತು. ಗ್ರಾಮದಲ್ಲಿನ ಸವರ್ಣಿಯರ ಕೇರಿಗೆ ಬರುವ ಪಂಚಾಯತ್ ನೀರು ಅದೇ ದಲಿತರ ಕೇರಿಗೆ ಬರಲು ಮಿನಾಮೇಷ ಮಾಡುತ್ತಿತ್ತು. ಸವರ್ಣಿಯರ ಕೇರಿಗೆ ಚೆನ್ನಾಗಿಯೇ ನೀರು ಬಿಡುತ್ತಿದ್ದ ವಾಟರ್ ಮ್ಯಾನ್ ಮುನಿರಾಜು, ದಲಿತರ ಕೇರಿಗೆ ನೀರು ಬಿಡಲು ತಕರಾರು ಮಾಡುತ್ತಿದ್ದ. ಹದಿನೈದು ದಿನಕ್ಕೂಮ್ಮೆ ದಲಿತರ ಕೇರಿಗೆ ನೀರು ಬೀಡುತ್ತಿದ್ದ. ನೀರಿಲ್ಲದೆ ದಲಿತ ಕಾಲೋನಿಯ ಜನರು ಹಣ ಕೊಟ್ಟು ಖಾಸಗಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದರು. ನೀರಿನ ವಿಚಾರದಲ್ಲಿ ಜಾತಿ ತಾರತಮ್ಯ ಮಾಡುತ್ತಿದ್ದ ಹಾದ್ರೀಪುರ ಪಂಚಾಯತ್ ಮುಂದೆ ಕಾಲೋನಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಸಹ ಮಾಡಲಾಗಿತ್ತು.
ಪಬ್ಲಿಕ್ ನೆಕ್ಸ್ಟ್ ನ ಈ ವರದಿಗೆ ಎಚ್ಚೆತ್ತ ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ಮಧುರನಹೊಸಹಳ್ಳಿಯ ದಲಿತರ ಕೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಲಿತರ 27 ಕುಟುಂಬಗಳನ್ನ ಮಾತನಾಡಿಸಿ ಅವರ ಸಮಸ್ಯೆ ಅಲಿಸಿದರು. ವಾರಕ್ಕೆ ಎರಡು ಬಾರಿ ನೀರು ನೀಡುವಂತೆ ಸೂಚನೆ ನೀಡಿದರು. ದಲಿತರ ಕಾಲೋನಿಯಲ್ಲಿ ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು ಮತ್ತು ಹೊಸ ವಾಟರ್ ಮ್ಯಾನ್ ನೇಮಕ ಮಾಡಿಕೊಳ್ಳುವುದ್ದಾಗಿ ಹೇಳಿದರು.
ತುಳಿತಕ್ಕೆ ಒಳಗಾದ ಜನರಿಗೆ ಮೊದಲ ಆದ್ಯತೆಯಲ್ಲಿ ಸರ್ಕಾರಿ ಸವಲತ್ತುಗಳು ಸಿಗಬೇಕು. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದ್ರು ಜಾತಿ ತಾರತಮ್ಯ ಮಾಡಿ ದಲಿತರ ಸವಲತ್ತು ಕಿತ್ತು ಕೊಳ್ಳುತ್ತಿರುವುದು ಈ ದೇಶದ ದುರ್ದೈವ.
PublicNext
15/05/2022 04:29 pm