ಪಾಲಿಕೆಯಿಂದ ಭೋಗ್ಯಕ್ಕೆ ನೀಡಲಾಗಿರುವ ಕೆಲ ಆಸ್ತಿಗಳ ಅವಧಿ ಮುಗಿದಿದ್ದು, ಅದನ್ನು ಶೀಘ್ರ ವಾಪಸ್ ಪಡೆಯಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಸ್ತಿ) ರಾಮಪ್ರಸಾದ್ ಮನೋಹರ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಅಡಿಯಲ್ಲಿ 6215 ಆಸ್ತಿಗಳಿದ್ದು, ಈ ಪೈಕಿ ಭೋಗ್ಯಕ್ಕೆ ನೀಡಲಾಗಿರುವ 163 ಆಸ್ತಿಗಳ ಅವಧಿ ಮುಗಿದಿದೆ. ಸದ್ಯ 7 ತೆರವುಗೊಳಿಸಲಾಗಿದ್ದು, ಶೀಘ್ರದಲ್ಲೇ ಎಲ್ಲವನ್ನೂ ತೆರವು ಮಾಡಲಾಗುವುದು ಎಂದರು.
ನಗರದಲ್ಲಿ ಒಟ್ಟು ರಸ್ತೆ ಗುಂಡಿಗಳು 13424 ಗಳಿದ್ದು, 516 ಗುಂಡಿ ನಿನ್ನೆ ಮುಚ್ಚಲಾಗಿದೆ. ಇಲ್ಲಿಯವರೆಗೂ 11, 315 ಮುಚ್ಚಲಾಗಿದ್ದು, 2109 ಗುಂಡಿಗಳು ಮುಚ್ಚಲು ಬಾಕಿಯಿದೆ. ಕೆರೆ ಉಳಿಸಲು ಅನುದಾನ ನೀಡುವ ಜೊತೆಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜುಲೈ 10ರೊಳಗೆ ಸಮವಸ್ತ್ರ: ಸಮವಸ್ತ್ರ, ಶೂ- ಸಾಕ್ಸ್ ಜುಲೈ 10 ರೊಳಗೆ ನೀಡಲಾಗುತ್ತದೆ. ವಾರದಲ್ಲಿ ಪುಸ್ತಕ ನೀಡಲಾಗುತ್ತದೆ. ಇಸ್ಕಾನ್ ಸಹಭಾಗಿತ್ವದಲ್ಲಿ ಒಟ್ಟು 11 ಸಾವಿರ ಮಕ್ಕಳಿಗೆ ಬಿಸಿಯೂಟ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಲೆಗೆ ಹೋಗುವ ದಾರಿ ಒತ್ತುವರಿ: ದಾಸರಹಳ್ಳಿ ವಲಯದ ಸಿದ್ಧಾರ್ಥ ನಗರದ ಶಾಲೆಯೊಂದಕ್ಕೆ ಹೋಗಿದ್ದೆ. ಶಾಲೆಗೆ ಹೋಗುವ ರಸ್ತೆಯನ್ನೇ ಒತ್ತುವರಿ ಮಾಡಲಾಗಿದೆ. ಮೋರಿ ದಾಟಿ ಹೋಗುವ ಪರಿಸ್ಥಿತಿ ಬಂದಿದೆ. ಜತೆಗೆ, ಎಸ್ ಡಬ್ಲ್ಯೂಡಿ ಪಕ್ಕದಲ್ಲೇ ಶಾಲೆಯಿದೆ. ಹಲವಾರು ಶಾಲೆಗಳಿಗೆ ಸ್ಥಳ ಹಾಗೂ ಅನುದಾನ ಕೊರತೆ ಇದೆ ಎಂದರು.
Kshetra Samachara
11/06/2022 07:46 pm