ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ದುಂದು ವೆಚ್ಚ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಆಡಿದ್ದೆ ಆಟವಾಗಿ ಬಿಟ್ಟಿದೆ. ನಾಲ್ಕು ವರ್ಷದ ಹಿಂದೆ ಅಭಿವೃದ್ಧಿ ಪಡಿಸಲಾಗಿದ್ದ ಉದ್ಯಾನವನ ಹಾಗೂ ಕಂಪೌಂಡ್ ಧ್ವಂಸ ಮಾಡಲಾಗಿದೆ.

ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆಯ ಕಂಪೌಂಡ್, ಗೋಡೆ ಗಳನ್ನು ಒಡೆಯಲಾಗಿದೆ. ಗಾಂಧಿ ಪ್ರತಿಮೆ ಪ್ರತಿಭಟನೆಗಳ ಕೇಂದ್ರ ಬಿಂದುವಾಗಿದ್ದು,2018 ರಲ್ಲಿ ಸುಸಜ್ಜಿತ ವಾಲ್,ಪಾರ್ಕ್, ನ್ನು 32 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಆದರೆ ಪಾಲಿಕೆಯ ಮುಖ್ಯ ಎಂಜ ನೀಯರ್ ಯೋಜನೆ ಲೋಕೇಶ್ ರವರಿಂದ ದುಂದುವೆಚ್ಚ ನಡೆದಿರುವ ಆರೋಪ ಕೇಳಿ ಬಂದಿದೆ.

ಖಾಸಗಿ ಕಂಪನಿಯ ಜತೆ ಶಾಮೀ ಲಾಗಿ ಗಟ್ಟಿ- ಮುಟ್ಟಾಗಿದ್ದ ಕಂಪೌಂಡ್, ಪಾರ್ಕ್ ನೆಲಸಮ ಮಾಡಲಾಗಿದೆ. ಮಹಾತ್ಮ ಗಾಂಧಿ ಪ್ರತಿಮೆ ಸುತ್ತಲೂ ನಿರ್ಮಿಸಲಾಗಿದ್ದ ಉದ್ಯಾನವನ ಹಾಗೂ ಕಂಪೌಂಡ್ ಇದೀಗ ನೆಲಸಮವಾಗಿದೆ.

1997 ರಲ್ಲಿ ಗಾಂಧಿ ಪ್ರತಿಮೆ ಹಾಗೂ ಉದ್ಯಾನವನವನ್ನು ಸ್ಥಾಪಿಸಲಾ ಗಿತ್ತು. 2016 ರಲ್ಲಿ 32 ಲಕ್ಷ ವೆಚ್ಚ ದಲ್ಲಿ ನವೀಕರಣ ಆರಂಭವಾಗಿ 2018 ರಲ್ಲಿ ಪೂರ್ಣಗೊಂಡಿತ್ತು.

Edited By :
Kshetra Samachara

Kshetra Samachara

25/06/2022 08:16 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ