ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತು ಕೆರೆಗೆ ತಡೆಗೋಡೆ ನಿರ್ಮಿಸಿದ ಅಧಿಕಾರಿಗಳು!

ಬಾರಿ ಮಳೆ ಬಂದ ಕಾರಣ ಮಡಿವಾಳ ಕೆರೆಯ ತಡೆಗೋಡೆ ಒಡೆದು ಕೊಳಚೆ ನೀರು ಕೆರೆಗೆ ಪ್ರವೇಶ ಮಾಡುತ್ತಿತ್ತು.ಇದರ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.ವರದಿಯ ನಂತರ ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಒಡೆದು ಹೋಗಿರುವ ತಡೆಗೋಡೆಯನ್ನು ಸರಿಪಡಿಸುವ ಭರವಸೆ ನೀಡಿದರು.ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದಂತೆ ಮಾಡಿದ್ದಾರೆ.

ಒಡೆದು ಹೋಗಿದ್ದ ತಡೆಗೋಡೆಯನ್ನು ಮತ್ತೆ ಮತ್ತೆ ಸರಿಪಡಿಸಿ ಕೊಳಚೆ ನೀರು ಕೆರೆಗೆ ಬರದಂತೆ ತಡೆಗೋಡೆ ನಿರ್ಮಿಸಿದ್ದಾರೆ.ತಡೆಗೋಡೆ ನಿರ್ಮಾಣದ ನಂತರ ಕೊಳಚೆ ನೀರು ಈಗ ಕೆರೆಗೆ ಬರುವುದು ನಿಂತಿದೆ.ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡದ್ದರಿಂದ ಮಡಿವಾಳ ಕೆರೆಯಲ್ಲಿರುವ ಅಮಾಯಕ ಪಕ್ಷಿಗಳು ಮತ್ತು ಜಲಚರಗಳು ಉಳಿದಿವೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By :
Kshetra Samachara

Kshetra Samachara

04/06/2022 08:20 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ