ಮಹಿಳಾ ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತೆಗಾಗಿ ಬಿಎಂಟಿಸಿ ವತಿಯಿಂದ 'ನಿರ್ಭಯಾ ಯೋಜನೆಯಡಿ'ಯಲ್ಲಿ 'ಪಿಂಕ್ ಸಾರಥಿ' ಹೆಸರಿನ ಜೀಪುಗಳನ್ನು ಹಿಂದಿನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಲೋಕಾರ್ಪಣೆ ಮಾಡಿದ್ದರು.
ನಿರ್ಭಯಾ ಯೋಜನೆಯಡಿ'ಯಲ್ಲಿ ವಾಹನಗಳ ಖರೀದಿಗಾಗಿ 56.7 ಕೋಟಿರೂ. ಅನುದಾನ ನೀಡಲಾಗಿತ್ತು. ಇದರಲ್ಲಿ 25 ಮಹೀಂದ್ರಾ ಬೊಲೆರೊ ವಾಹನಗಳನ್ನು ಖರೀದಿಸಿದ್ದು, ಅದಕ್ಕೆ 'ಪಿಂಕ್ ಸಾರಥಿ' ಎಂದು ಹೆಸರಿಡಲಾಗಿತ್ತು.
ಪಿಂಕ್ ಸಾರಥಿ ವಾಹನಗಳಲ್ಲಿನ ವಿಶೇಷತೆ ಎಂದರೆ, ಇದರಲ್ಲಿ ಜಿಪಿಎಸ್ ನಿರ್ವಹಣೆ ಹಾಗೂ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಯೋಜನೆ ಕೂಡಾ ಹಳ್ಳ ಹಿಡಿದಿದೆ.
ಇಂತಹ ವಾಹನಗಳನ್ನು ಬಿಎಂಟಿಸಿ ಸಾರಥಿ ವೆಹಿಕಲ್ ಗಳಾಗಿ ಪರಿವರ್ತಿಸಿಕೊಂಡಿದೆ. ಬಸ್ ಸ್ಟ್ಯಾಂಡ್ ಗಳಲ್ಲಿ ಬಸ್ ನಿಲ್ಲುತ್ತೊ ಇಲ್ಲವೋ, ಸಿಗ್ನಲ್ ಜಂಪ್, ಟಿಕೆಟ್ ರಹಿತ ಪ್ರಯಾಣ ಕುರಿತಂತೆ ತಪಾಸಣೆ ಮಾಡುವ ಅಧಿಕಾರಿಗಳಿಗೆ ಈ ವಾಹನ ನೀಡಲಾಗಿದೆ.
Kshetra Samachara
04/06/2022 06:27 pm