ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಂಧದನಾಡು ಜನಪರ ವೇದಿಕೆಯಿಂದ 'ಸಮಾಜಕ್ಕೆ ಮರಳಿ ನೀಡು ಅಭಿಯಾನ'

ಆನೇಕಲ್: ಗಂಧದನಾಡು ಜನಪರ ವೇದಿಕೆ ವತಿಯಿಂದ 'ಸಮಾಜಕ್ಕೆ ಮರಳಿ ನೀಡು ಅಭಿಯಾನ'ದ ಪ್ರಯುಕ್ತ ಇಂದು ಆನೇಕಲ್ ತಾಲೂಕಿನ ಕಾವಲ ಹೊಸಹಳ್ಳಿ ಜನತಾ ಕಾಲೋನಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಇದೇ ವೇಳೆ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಅತಿ ಹೆಚ್ಚು ಅಂಕಗಳಿಸಿದ 7 ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ಓರ್ವ ವಿದ್ಯಾರ್ಥಿನಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಜವೇ ಸಂಸ್ಥಾಪಕ ಅಧ್ಯಕ್ಷ ವಿಜಯರಾಮ, ರಾಯಸಂದ್ರ ಜಿ.ದೊರೆಸ್ವಾಮಿ, ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿಡಿಹೊಸಕೋಟೆ ಮುನಿಕೃಷ್ಣಪ್ಪ, ಲಯನ್ಸ್ ಕ್ಲಬ್ ರಿಜಿನಲ್ ಚೇರ್ ಪರ್ಸನ್ ಮೋಹನ್ ಕುಮಾರ್, ವಿನಾಯಕ ಏಜೇನ್ಸಿಸ್ ಮಾಲಿಕರಾದ ಮುನಿತಿಮ್ಮಾರೆಡ್ಡಿ, ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

16/07/2022 07:57 pm

Cinque Terre

592

Cinque Terre

0

ಸಂಬಂಧಿತ ಸುದ್ದಿ