ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣೇಶನ ವಿಸರ್ಜನೆ ಕುಣಿದು ಕುಪ್ಪಳಿಸಿದ ಜನರು

ಯಲಹಂಕ: ಕರೋನಾ ಸಂಕಷ್ಟದಲ್ಲಿ‌ ಮರಡುಗಟ್ಟಿದ್ದ ಮನುಷ್ಯನ ಉಲ್ಲಾಸ ಮತ್ತು ಉತ್ಸಾಹ ಈ ಸಲದ ಗಣೇಶೋತ್ಸವ ಮತ್ತು ಗಣೇಶ ದೇವರ ವಿಸರ್ಜನೆ ವೇಳೆ ಹತ್ತುಪಟ್ಟು ಹೆಚ್ಚಾಗಿದೆ ಎಂದರೆ ತಪ್ಪಲ್ಲ. ದೇಶ-ರಾಜ್ಯಾದ್ಯಂತ ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿದ್ದರೆ ಯಲಹಂಕದಲ್ಲಿ ಮತ್ತಷ್ಟು ಜೋರಾಗಿದೆ. ಅದರಲ್ಲೂ ಯಲಹಂಕದ ಸುರಭಿ ಲೇಔಟಿನಲ್ಲಿ ವಿಜಯ ವಿನಾಯಕ ಗೆಳೆಯರ ಬಳಗವು ಕಳೆದ ಹನ್ನೊಂದು ವರ್ಷಗಳಿಂದ ಗಣೇಶೋತ್ಸವ ಆಚರಣೆ ನಡೆಸಿಕೊಂಡು ಬರ್ತಿದೆ.

ಎರಡು ವರ್ಷಗಳಿಂದ ನಿಂತಿದ್ದ ಗಣೇಶ ಉತ್ಸವ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇವರನ್ನಿಟ್ಟು ಇಂದಿಗೆ ಹನ್ನೊಂದು ದಿನಗಳಿಂದ ಪೂಜಾಕಾರ್ಯ ಯಶಸ್ವಿಯಾಗಿ ನಡೆದರೆ ಇಂದು ಕೊನೆಯ ದಿನ. ವಿಸರ್ಜನೆ ಪ್ರಯುಕ್ತ ಡಿ.ಜೆ, ಡೊಳ್ಳು, ‌ಕೀಲುಕುದುರೆ, ತಮಟೆ ಹೀಗೆ ಏಳಕ್ಕು ಹೆಚ್ಚು ತಂಡ ಸಾಂಸ್ಕೃತಿಕ ವೈಭವವನ್ನೆ ಧರೆಗಿಳಿಸಿತ್ತು. ಅಜ್ಜಿಯಂದಿರು, ಮಕ್ಕಳು, ಮೊಮ್ಮಕ್ಕಳು ವಯಸ್ಸಿನ ಅಂತರವಿಲ್ಲದೆ ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Nagesh Gaonkar
PublicNext

PublicNext

11/09/2022 10:41 pm

Cinque Terre

48.72 K

Cinque Terre

0

ಸಂಬಂಧಿತ ಸುದ್ದಿ