ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣೇಶೋತ್ಸವ ಪೆಂಡಾಲ್‌ನಲ್ಲಿ ಸಾವರ್ಕರ್

ಕೆಂಗೇರಿ :ಈ ಬಾರಿ ಗಣೇಶೋತ್ಸವ ಪೆಂಡಾಲ್‌ನಲ್ಲಿ ಸಾವರ್ಕರ್ ಪೋಟೋ ಹಾಕಲು ನಿರ್ಧರಿಸಿದ್ದ ಕೆಲ ಹಿಂದೂ ಸಂಘಟನೆಗಳು ಹೇಳಿದಂತೆ ಗಣೇಶ ಪೆಂಡಾಲ್‌ನಲ್ಲಿ ಸಾವರ್ಕರ್ ಫೋಟೋ ಇಟ್ಟು ಹಬ್ಬ ಆಚರಿಸಿದ್ದಾರೆ.

ನಾಗರಭಾವಿಯ ಮಲ್ಲತ್ತಹಳ್ಳಿಯಲ್ಲಿ ಸಾವರ್ಕರ್ ಗಣೇಶೋತ್ಸವ ಆಚರಣೆ ಮಾಡಿದ್ದು, ಗಣೇಶನ ಪೆಂಡಾಲ್‌ನಲ್ಲಿ ಸಾವರ್ಕರ್, ಬಾಲಗಂಗಾಧರ ತಿಲಕರ ಪೋಟೋ ಇಟ್ಟು ಪೂಜೆ‌ಮಾಡಿದ್ದಾರೆ. ಶ್ರೀರಾಮ ಸೇನೆ ನಗರಾಧ್ಯಕ್ಷ ಚಂದ್ರಶೇಖರ್ ಕೋಟೆ ನೇತೃತ್ವದಲ್ಲಿ ಸಾವರ್ಕರ್ ಗಣೇಶೋತ್ಸವ ಮಾಡಿದ್ದು, ಪೆಂಡಾಲ್ ಅಕ್ಕ ಪಕ್ಕ ಮನೆ ಗೋಡೆಗಳಿಗೂ ಸಾವರ್ಕರ್, ತಿಲಕರ ಪೋಸ್ಟರ್ ಅಂಟಿಸಿ ಗಣೇಶೋತ್ಸವದಲ್ಲಿ ಸಾವರ್ಕರ್ ಪುಸ್ತಕ ಹಂಚಿ ಹಬ್ಬ ಆಚರಿಸಿದ್ದಾರೆ.

Edited By : Nagesh Gaonkar
PublicNext

PublicNext

31/08/2022 03:28 pm

Cinque Terre

36.39 K

Cinque Terre

0

ಸಂಬಂಧಿತ ಸುದ್ದಿ