ಬೆಂಗಳೂರು: ತಮ್ಮ 12ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಬ್ರಿಟೀಷರ ರೈಲುಗಳಿಗೆ ಬಾಂಬ್ ಹಾಕುತ್ತ ತಿಂಗಳಾನುಗಟ್ಟಲೇ ಜೈಲುವಾಸ ಅನುಭವಿಸಿ, 94ರ ಇಳಿವಯಸ್ಸಿನಲ್ಲಿ ಗಂಡುಗಲಿಯಂತೆ ಮಾತನಾಡುತ್ತಿರುವ ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಹೆಸರು ನಂದಿಗಂ ಆಂಜೀನಪ್ಪ. ಇವರು ಐಟಿಐ ಆಂಜೀನಪ್ಪ ಎಂದು ಕೂಡ ಹೆಸರುವಾಸಿಯಾಗಿದ್ದಾರೆ. ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಕ್ವಿಟ್ ಇಂಡಿಯಾ ಚಳುವಳಿಯ ನೆನಪಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಆಂಜೀನಪ್ಪ ಅವರ ಹೊಸಕೋಟೆಯ ನಿವಾಸದಲ್ಲಿ ಸರ್ಕಾರದಿಂದ ಸನ್ಮಾನಿಸಲಾಗಿದೆ. ಇದಕ್ಕೆ ಆಂಜಿನಪ್ಪ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ಹೊಸಕೋಟೆಯ ಕಮ್ಮವಾರಿ ಹೊನ್ನೂರಪ್ಪ ಮತ್ತು ಲಕ್ಷಮ್ಮ ದಂಪತಿಯ ಮಗ ಆಂಜೀನಪ್ಪರನ್ನು ಅವರ ಶ್ರೀಮತಿ ಚಂದ್ರಾವತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಸಮ್ಮುಖದಲ್ಲಿ, ಹೂವು, ಹಣ್ಣು ಮತ್ತು ರಾಷ್ಟ್ರದ್ವಜ ನೀಡಿ ಜಿಲ್ಲಾ ಉಸ್ತುವಾರಿ ಸುಧಾಕರ್, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಲತಾ, ಎ.ಸಿ. ತೇಜಸ್, ಹೊಸಕೋಟೆ ತಹಶೀಲ್ದಾರ್ ಮಹೇಶ್, ಎಸ್.ಪಿ ಮಲ್ಲಿಕಾರ್ಜುನ್ ಅವರ ನಿಯೋಗ ಸನ್ಮಾನಿಸಿತು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವೇಳೆ ಹೋರಾಟಗಾರರನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸ. ಇದರ ಜೊತೆ ಆಂಜೀನಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರ ಬದುಕು, ದೇಶಾಭಿಮಾನ ಜಿಲ್ಲೆಗೆ ನಾಡಿಗೆ ದೇಶಕ್ಕೆ ಶಾಶ್ವತವಾಗಿ ಉಳಿಯುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ
PublicNext
10/08/2022 09:21 am