ಬೆಂಗಳೂರು : ಇಂದು ವಿಶ್ವ ತಂಬಾಕು ರಹಿತ ದಿನ. ಈ ಹಿನ್ನೆಲೆಯಲ್ಲಿ ನಗರದ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ನ ವಿದ್ಯಾರ್ಥಿಗಳು ತಂಬಾಕು ವಿರೋಧಿ ರ್‍ಯಾಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಒಂದನೇ ಕರ್ನಾಟಕದ ಬೆಟಾಲಿಯನ್ ನ N.C.C. ಯುವತಿಯರಿಂದ ರ್‍ಯಾಲಿ ನಡೆಸಲಾಗಿತ್ತು.
ಯುವತಿಯರಿಗೆ ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಸಾಥ್ ನೀಡಿದ್ರು. ಶಾಲೆಯಿಂದ ಆರಂಭಿಸಿ ಜಾಲಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಗಳವರೆಗೆ ರ್‍ಯಾಲಿ ನಡೆಯಿತು.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
31/05/2022 09:12 pm