ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಜ್ಜನ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಂಬೇಡ್ಕರ್ ಮೊಮ್ಮಗ

ಆನೇಕಲ್: ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಬದುಕು ಸಾಗಿಸುವ ನಿಟ್ಟಿನಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅವರು ಯಾವುದೇ ಒಂದು ಸಮುದಾಯಕ್ಕೆ ಸಂವಿಧಾನ ರಚನೆ ಮಾಡಿಲ್ಲ. ಎಲ್ಲಾ ಸಮುದಾಯದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮೀಸಲಾತಿಯಲ್ಲಿ ಅನುಕೂಲ ಕಲ್ಪಿಸುವಂತೆ ರಚನೆ ಮಾಡಿದ್ದಾರೆ. ಸಂವಿಧಾನದ ಮೀಸಲಾತಿಯಿಂದ ಸಾಧ್ಯವಾಯಿತು ಎಂದು ತಮಿಳುನಾಡಿನ ವಿಡುದಲೈ ಚಿರತೆ ಕಚ್ಚಿ ಲೋಕಸಭಾ ಸದಸ್ಯ ತೋಳ್ ತಿರುಮಾವಳ್ಳನ್ ತಿಳಿಸಿದರು.

ಇಲ್ಲಿನ ಸರ್ಜಾಪುರದ ಆಟದ ಮೈದಾನದಲ್ಲಿ 8 ಅಡಿ ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆಯನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಯಶ್ವಂತ್ ಭೀಮರಾವ್ ಅಂಬೇಡ್ಕರ್ ಉದ್ಘಾಟನೆಯನ್ನು ನೆರವೇರಿಸಿದರು. ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸ್ಥಳೀಯ ಶಾಸಕ ಶಿವಣ್ಣ ಅಂಬೇಡ್ಕರ್ ಪ್ರಗತಿಪರ ಒಕ್ಕೂಟ ಅಧ್ಯಕ್ಷರುಗಳು ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

24/04/2022 09:27 pm

Cinque Terre

2.42 K

Cinque Terre

0

ಸಂಬಂಧಿತ ಸುದ್ದಿ