ಆನೇಕಲ್: ಇತ್ತೀಚೆಗೆ ನಾಟಿ ತಳಿಯ ಹೋರಿಗಳು, ಎತ್ತುಗಳು ನಶಿಸಿ ಹೋಗುತ್ತಿವೆ. ಆ ಕಾರಣದಿಂದಾಗಿ ಮುಂದಿನ ಪೀಳಿಗೆಗಾದರೂ ಇವುಗಳ ಸಂತತಿ ಹೆಚ್ಚಾಗಬೇಕು ಎಂದು ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ಮುರುಗೇಶ್ ತಿಳಿಸಿದರು.
ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಶ್ರೀ ಮುತ್ಯಾಲಮ್ಮ ದೇವಿ ಹೆಸರಿನಲ್ಲಿ ನಡೆಯುವ ಸಂಕ್ರಾಂತಿ ಸಂಭ್ರಮ- ಹೋರಿಗಳ ಮೆರವಣಿಗೆಯಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಆಧುನಿಕ ಜೀವನ ಶೈಲಿಯಲ್ಲಿ ಎಲ್ಲವೂ ವಿಷಯುಕ್ತ. ನೀರು-ಗಾಳಿ- ಆಹಾರ ವಿಷಕಾರಿಯೇ ಆಗಿದೆ. ಆದ್ದರಿಂದ ಎತ್ತುಗಳನ್ನು ಮನೆಗಳಲ್ಲಿಯೇ ಸಾಕುವುದರಿಂದ ಆರೋಗ್ಯ ಸುಧಾರಣೆ ಆಗುತ್ತೆ. ಹೀಗಾಗಿ ಮುಂದಿನ ಪೀಳಿಗೆಗೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮುರುಗೇಶ್ ಹೇಳಿದರು.
ಮತ್ತೊಬ್ಬ ಪ್ರಗತಿಪರ ರೈತ ಮಹೇಶ್ ಮಾತನಾಡಿ, ನಾಟಿ ಹೋರಿ- ಹಸುಗಳಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಹಳ್ಳಿಗಳಲ್ಲಿ ಅತಿ ಹೆಚ್ಚು ಹೋರಿ ಸಾಕಾಣಿಕೆಯಿಂದ ಅರೋಗ್ಯ ವೃದ್ಧಿ ಸಾಧ್ಯ ಎಂದರು. ಶಾಸಕ ಶಿವಣ್ಣ, ತಮಿಳುನಾಡಿನ ತಳಿ ಭಾಗದ ಶಾಸಕ ವೈ. ಪ್ರಕಾಶ್, ಮತ್ತಿತರ ಗಣ್ಯರು, ರೈತರು ಭಾಗಿಯಾಗಿದ್ದರು.
PublicNext
26/01/2022 09:15 pm