ಬೆಂಗಳೂರು : ಅಪ್ಪು ಅಗಲಿಕೆಯನ್ನು ಯಾರು ಒಪ್ಪುತ್ತಿಲ್ಲ. ಅಪ್ಪು ಇಹಲೋಕ ತ್ಯಜಿಸಿ ಇಂದಿಗೆ 11ನೇ ದಿನ. ಇಂದು ತೆಲುಗು ನಟ ಸಿದ್ದಾರ್ಥ್ ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅಪ್ಪು ಸಮಾಧಿಗೆ ನಮನ ಸಲ್ಲಿಸಿ ಮಾತನಾಡಿದ ಸಿದ್ದಾರ್ಥ್ ಪುನೀತ್ ಅವರು ಇಲ್ಲಾ ಎನ್ನುವುದನ್ನು ನಾನು ಈಗಲೂ ಬಿಲೀವ್ ಮಾಡೋಕಾಗ್ತಿಲ್ಲ. ಪುನೀತ್ ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ.
ತುಂಬಾ ಸರಳ ವ್ಯಕ್ತಿ, ವೆರಿ ಟ್ಯಾಲೆಂಟೆಡ್ ಅವರು ಯಾವಾಗಲೂ ಜೀವಂತವಾಗಿರುತ್ತಾರೆ. ಯುವಜನತೆಗೆ ಅವರು ಸದಾ ಸಪೋರ್ಟ್ ಮಾಡುತ್ತಿದ್ದರು. ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ ಅವರೇ ನಿಜವಾದ ಶ್ರೀಮಂತರು ಎಂದು ಭಾವುಕರಾಗಿದ್ದಾರೆ.
ಹಲವು ಬಾರಿ ನಾನು ಅವರನ್ನು ಭೇಟಿಯಾದಾಗ ಅನೇಕ ಉತ್ತಮ ವಿಚಾರಗಳನ್ನು ಹೇಳುತ್ತಿದ್ದರು. ಬೇರೆಯವರ ಬಗ್ಗೆ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದರು ನಿಜಕ್ಕೂ ಇವರ ಅಗಲಿಕೆ ತುಂಬಲಾರದ ನಷ್ಟ ಎಂದು ಕಣ್ಣೀರು ಹಾಕಿದ್ದಾರೆ.
Kshetra Samachara
08/11/2021 04:39 pm