ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಿ.ಎಸ್.ಟಿ ಹೆಚ್ಚಳ ಖಂಡಿಸಿ ಚಿಟ್ ಫಂಡ್ಸ್ ನಿಂದ ಪ್ರತಿಭಟನೆ!

ಜಿ.ಎಸ್.ಟಿ ಹೆಚ್ಚಳದಿಂದ ಅನೇಕ ತೊಂದರೆಗಳಾಗುತ್ತಿದ್ದು, ಗ್ರಾಹಕರು ಕೂಡ ಇದರಿಂದ ಬೇಸತ್ತು ಚಿಟ್ ಫಂಡ್ ಗಳಿಗೆ ಹಣ ಕಟ್ಟಲು ಹಿಂಜರಿಯುತ್ತಿದ್ದಾರೆ ಎಂದು ಕರ್ನಾಟಕ ಚಿಟ್ ಸ್ಟರ್ ಅಸೋಸಿಯೇಷ್ ಅಧ್ಯಕ್ಷ ಎಸ್ ಬಸವಲಿಂಗಪ್ಪ ಹೇಳಿದರು.

ಸೋಮವಾರ ಅಸೋಸಿಯೇಷ್ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಸವಲಿಂಗಪ್ಪ, ಸರ್ಕಾರ ಶೇ 12 ಇದ್ದ ಜಿ.ಎಸ್.ಟಿ ಅನ್ನು ಶೇ.18 ಕ್ಕೆ ಹೆಚ್ಚಿಸಿದ್ದಾರೆ. ಇದರಿಂದ ನಮ್ಮ ರಾಜ್ಯದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮಂದಿ ಈ ಕೆಲಸವನ್ನು ನಂಬಿಕೊಂಡಿದ್ದು, ಅವರೆಲ್ಲರಿಗೂ ತೊಂದರೆಯಾಗಲಿದೆ.

ರಾಜ್ಯದಲ್ಲಿ 1,700 ನೋಂದಣಿಯಾದ ಕಂಪನಿಗಳಿವೆ. ವರ್ಷಕ್ಕೆ 9 ಸಾವಿರ ಕೋಟಿ ರೂ. ವ್ಯವಹಾರ ಆಗುತ್ತಿದ್ದು, ಜಿ.ಎಸ್.ಟಿ ಹೆಚ್ಚಳದಿಂದ ತೊಂದರೆ ಆಗುತ್ತದೆ. ಈ ಕ್ರಮವನ್ನು ವಿರೋಧಿಸಿ ರಾಜ್ಯದ ಎಲ್ಲ ಚಿಟ್ ಫಂಡ್ ಸಂಸ್ಥೆಯ ಮಾಲೀಕರು, ಸದಸ್ಯರು, ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳಿಗೆ ಚಿಟ್ ಫಂಡ್ ಮೇಲೆನ ಜಿ.ಎಸ್.ಟಿಯನ್ನು ಸಂಪೂರ್ಣವಾಗಿ ತೆಗೆಯಬೇಕು ಅಥವಾ ಕನಿಷ್ಠ ಶೇ. 5 ರಷ್ಟು ಇಳಿಸಬೇಕು ಎಂದು ಮನವಿ ಮಾಡಲಿದ್ದೇವೆ. ಅದರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಮ್ಮ ತೊಂದರೆಗಳ ಕುರಿತು ವಿವರಿಸಲಿದ್ದೇವೆ ಎಂದು ತಿಳಿಸಿದರು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

25/07/2022 07:10 pm

Cinque Terre

32.76 K

Cinque Terre

1

ಸಂಬಂಧಿತ ಸುದ್ದಿ