ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಸರಘಟ್ಟ ಕೆರೆಲಿ ದುರ್ಗಾಮಾತೆಗೆ ತೆಪ್ಪೋತ್ಸವ

ಬೆಂಗಳೂರು: ದಸರಾಹಬ್ಬದ ಪ್ರಯುಕ್ತ ಬೆಂಗಳೂರು ನಗರಜಿಲ್ಲೆ ಯಲಹಂಕ ತಾಲೂಕಿನ ಹೆಸರಘಟ್ಟ ಕೆರೆಯಲ್ಲಿಂದು ದಸರಾಹಬ್ಬದ ಪ್ರಯುಕ್ತ ದುರ್ಗಾಂಭ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇತಿಹಾಸ ಪ್ರಸಿದ್ದ ಎರಡು ಸಾವಿರ ಎಕರೆಗೂ ಅಧಿಕ‌ ವಿಸ್ತೀರ್ಣದ ಹೆಸರಘಟ್ಟ ಕೆರೆ ಅರ್ಕಾವತಿ ನದಿ ಪಾತ್ರದ ಅತಿದೊಡ್ಡ ಕೆರೆ. ಇಪ್ಪತ್ತುವರ್ಷಗಳಾಗಿವೆ ಕೆರೆಕೋಡಿ ಬಿದ್ದು. ಈ ಸಲ ಕೆರೆ 60ರಷ್ಟು ತುಂಬಿದೆ. ಸುಮಾರು ಇಪ್ಪತ್ತು ವರ್ಷಗಳಾಗಿದೆ ಹೆಸರಘಟ್ಟ‌ ಕೆರೆತುಂಬಿದೆ. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ದುರ್ಗಾಂಭ ದೇವಿಯ ತೆಪ್ಪೊತ್ಸವ ಕಾರ್ಯಕ್ರಮ ನಡೆಯಿತು.

ಪ್ರತಿ ವರ್ಷದಂತೆ ಈವರ್ಷವೂ ತಾಯಿ ದುರ್ಗಾಂಭ ದೇವಿಗೆ ತೆಪ್ಪೋತ್ಸವ ನಡೆಯಿತು. ಅರ್ಕಾವತಿ ನದಿ ಪಾತ್ರದ ಕೆರೆಲಿ ಉತ್ಸವಮೂರ್ತಿಯ ಮೆರವಣಿಗೆ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಪ್ರತಿ ವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿ ಆಚರಣೆ ನಡೆಯಿತು. ಕೆರೆಯಲ್ಲಿ ನೀರು ಹೆಚ್ಚಾಗಿರುವ ಹಿನ್ನೆಲೆ ತೆಪ್ಪೋತ್ಸವ ಹೆಚ್ಚು ಕಳೆಕಟ್ಟಿತ್ತು.

Edited By : PublicNext Desk
Kshetra Samachara

Kshetra Samachara

05/10/2022 09:29 pm

Cinque Terre

6.37 K

Cinque Terre

0