ಬೆಂಗಳೂರು: ಪಿಎಫ್ ಐ ಬ್ಯಾನ್ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಎಸಿಪಿ ನೇತೃತ್ವದಲ್ಲಿ ನಗರದ ಪಿಎಫ್ ಐ ಪ್ರಧಾನ ಕಚೇರಿ ಬಳಿ ಬಂದೋಬಸ್ತ್ ಮಾಡಲಾಗಿದೆ. ಜೆ.ಸಿ. ನಗರ ಎಸಿಪಿ ಮನೋಜ್ ಕುಮಾರ್ ಅಂಡ್ ಟೀಂ ನಿಂದ ಪಿಎಫ್ ಐ ಮುಖ್ಯ ಕಚೇರಿ ರಸ್ತೆಯಲ್ಲಿ ಖಾಕಿ ಸರ್ಪಗಾವಲಿದೆ.
ಯಾರಿಗೂ ಗುಂಪುಗೂಡಲು ಅವಕಾಶ ನೀಡದ ಪೊಲೀಸರು, ಪಿಎಫ್ ಐ ಕಚೇರಿ ರಸ್ತೆಯಲ್ಲಿ ವಾಹನಗಳನ್ನ ಸಹ ಬಿಡದೇ ಬಂದೋಬಸ್ತ್ ಮಾಡಿದ್ದಾರೆ. ಪ್ರತಿಭಟನೆ ನಡೆಸದಂತೆ ಈಗಾಗ್ಲೆ ಮುಸ್ಲಿಂ ಮುಖಂಡರ ಜೊತೆ ಪೊಲೀಸ್ರು ಮಾತುಕತೆ ನಡೆಸಿದ್ದಾರೆ. ಇದನ್ನೂ ಮೀರಿ ಯಾರಾದ್ರೂ ಬಾಲಬಿಚ್ಚಿ ಪ್ರತಿಭಟನೆ ಅಂತ ರಸ್ತೆಗೆ ಬಂದ್ರೆ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
PublicNext
28/09/2022 01:02 pm