ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಕ್ಕೂರು ಏರೋಡ್ರಮ್ ನ‌ ಖಾಸಗಿ ಮಾಡಲು ಹೊರಟಿದ್ಯಾ ಸರ್ಕಾರ? ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಬೆಂಗಳೂರು: ಜಕ್ಕೂರು ಫ್ಲೈಯಿಂಗ್ ಶಾಲೆಗಾಗಿ ಮೈಸೂರು ಮಹಾರಾಜರು ಕೊಟ್ಟ ಜಾಗವನ್ನು ಖಾಸಗಿ ಕಂಪನಿಗೆ ನೀಡಲು ಕ್ರೀಡಾ ಇಲಾಖೆ ಸಜ್ಜಾಗಿದ್ಯಾ ಅನ್ನೋ ಅನುಮಾನ ಮೂಡಿದೆ.

211 ಎಕರೆ ಜಾಗದಲ್ಲಿ 75 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡುವ ಹುನ್ನಾರದ ಬಗ್ಗೆ ಆರೋಪ ಕೇಳಿ ಬಂದಿದೆ. 1500 ಕೋಟಿ ಮೌಲ್ಯದ ಜಾಗ ಇದಾಗಿದ್ದು, ಈ ವಿಚಾರದಲ್ಲಿ ತನಿಖೆ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯಿಂದ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ‌.

ಜಕ್ಕೂರು ಏರೋಡ್ರಮ್ ಜಾಗವನ್ನು PPP ( ಪಬ್ಲಿಕ್ ಪ್ರೈವೇಟ್ ಪಾಟರ್ನ್ ಶಿಪ್ ) ಮಾದರಿಯಲ್ಲಿ ಸರ್ಕಾರ ಖಾಸಗಿಗೆ ಮಾರುವ ಹುನ್ನಾರ ಮಾಡುತ್ತಿದೆ ಅಂತಾ ಆರೋಪ ಕೇಳಿ ಬಂದಿದ್ದು, ಈ ಜಾಗದಲ್ಲಿ 25 ಎಕರೆ ಏರೋ ಕ್ಲಬ್, 50 ಎಕರೆಯನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಏರಿಯಾ ಎಂದು ಅಭಿವೃದ್ಧಿ ಪಡಿಸಲು ಕ್ರೀಡಾ ಮತ್ತು ಯುವಜನ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ ಎಂದು ದೂರು ಸಲ್ಲಿಕೆಯಾಗಿದೆ.

Edited By : Nagesh Gaonkar
PublicNext

PublicNext

17/09/2022 03:41 pm

Cinque Terre

25.68 K

Cinque Terre

1