ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅರ್ಧದಲ್ಲೇ ನಿಂತ ಮಾಗಡಿ ಹೆದ್ದಾರಿ ಕಾಮಗಾರಿ..!

ಬೆಂಗಳೂರು: ಮಾಗಡಿ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಂತೂ ಹೇಳತೀರದು. ಇದನ್ನರಿತ ಸರ್ಕಾರ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಒಂದು ಹೆದ್ದಾರಿಯನ್ನ ನಿರ್ಮಾಣ ಮಾಡ್ತಿದ್ದಾರೆ.

ದೃಶ್ಯಗಳಲ್ಲಿ ಕಾಣ್ತಿರುವ ಈ ಜಾಗ ಕೊಮ್ಮಗಟ್ಟಯಿಂದ ಸ್ವಲ್ಪ ಮುಂದೆ ಬಂದ್ರೆ ಅರ್ಚಕರ ಬಡಾವಣೆ ಅಂತ ಆ ಜಾಗ ಇದು. ಇದು ಹೆದ್ದಾರಿಯ ಮುಖ್ಯ ಸರ್ಕಲ್ ಆಗಿದೆ. ಇಲ್ಲಿಗೆ ಕೆಂಗೇರಿ, ಮೈಸೂರ್ ರಸ್ತೆ, ಹಳೆಬೈರೋಹಳ್ಳಿ, ಹೊಸಬೈರೋಹಳ್ಳಿಯಿಂದ ವಾಹನಗಳು ಸಂಚರಿಸುತ್ತವೆ.

ಆದ್ರೆ ಇಲ್ಲಿ ಸಮಸ್ಯೆ ಏನಪ್ಪ ಅಂದ್ರೆ ಮುಂದೆ ಈ ರಸ್ತೆ ಹಾದು ಹೋಗುವ ಜಾಗಗಳಲ್ಲಿ ರೈತರ ಹೊಲಗಳಿವೆ. ಅವರು ರಸ್ತೆಗೆ ಜಾಗಗಳನ್ನ ಬಿಟ್ಟು ಕೊಡದ ಕಾರಣ ಈ ರಸ್ತೆ ಅರ್ಧಂಬರ್ಧ ಆಗಿ ನಿಂತಿದೆ‌. ಈ ರಸ್ತೆ ಕಂಪ್ಲೀಟ್ ಆದ್ರೆ ಮಾಗಡಿಗೆ ಹೋಗುವ ವಾಹನಗಳೆಲ್ಲ ಇದೇ ರಸ್ತೆಯನ್ನ ಹೆಚ್ಚಾಗಿ ಬಳಸುತ್ತಾರೆ. ನೈಸ್ ರಸ್ತೆಗೆ ಹೋಗುವುದಿಲ್ಲ. ಹೀಗಾಗಿ ಈ ರಸ್ತೆಯನ್ನ ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ರೈತರ ಈ ಜಾಗಕ್ಕೆ ಸರ್ಕಾರ ನ್ಯಾಯಬದ್ಧವಾಗಿ ಹಣ ನೀಡಿ ರಸ್ತೆಯನ್ನ ಬೇಗ ಕಂಪ್ಲೀಟ್ ಮಾಡಿದ್ರೆ , ಸರಾಗವಾಗಿ ಮಾಗಡಿ ಮುಖ್ಯ ರಸ್ತೆಗೆ ತಲಪಬಹುದು. ಈ ಬಗ್ಗೆ ನಮ್ಮ ರಿಪೋರ್ಟರ್ ಸಣ್ಣದೊಂದು ವಾಕ್ ಥ್ರೂ ನಡೆಸಿದ್ದಾರೆ. ನೋಡೋಣ ಬನ್ನಿ..

Edited By : Nagesh Gaonkar
PublicNext

PublicNext

12/10/2022 06:09 pm

Cinque Terre

28.31 K

Cinque Terre

0

ಸಂಬಂಧಿತ ಸುದ್ದಿ