ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ವರದಿಯ ನಂತರ ಒಂದೇ ದಿನದಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ತಾವು ಮಾಡಿದ್ದ ಎಡವಟ್ಟನ್ನು ಸರಿಪಡಿಸಿದ್ದಾರೆ.
ನಿನ್ನೆ ಮಡಿವಾಳ ಕೆರೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರಾಜಕಾಲುವೆ ತಡೆಗೋಡೆ ಒಡೆದು ಕೊಳಚೆ ನೀರನ್ನು ಕೆರೆಯ ಒಳಗೆ ಬಿಡಲಾಗಿತ್ತು. ಇದರಿಂದ ಮಡಿವಾಳ ಕೆರೆಯಲ್ಲಿ ವಾಸವಾಗಿರುವ ನೂರಾರು ಪಕ್ಷಿಗಳು ಮತ್ತು ಮೀನುಗಳು ಇದೆ ಕೊಳಚೆ ನೀರನ್ನು ಕುಡಿಯಬೇಕು ಆಗಿತ್ತು. ಕೆರೆಯಲ್ಲಿ ಬಂದ ಕೊಳಚೆ ನೀರಿಂದ ಕೆರೆ ವಾಸನೆ ಬರುತ್ತಿದ್ದು ಮತ್ತು ಮೀನುಗಳು ಅಲ್ಲಲ್ಲಿ ಸತ್ತು ಬಿದ್ದಿದ್ದವು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.
ನಿನ್ನೆ ವರದಿಯ ನಂತರ ಇಂದು ಬೆಳಗ್ಗೆ ಫೀಲ್ಡ್‌ಗೆ ಇಳಿದ ಬಿಬಿಎಂಪಿ ಅಧಿಕಾರಿಗಳು ಬಿಳೇಕಹಳ್ಳಿ ಅನುಗ್ರಹ ಲೇಔಟ್ ಬಳಿ ಇದ್ದ ರಾಜಕಾಲುವೆ ತಡೆಗೋಡೆ ಹೊಡೆದಿದ್ದ ಜಾಗದಲ್ಲಿ ಕೆರೆಗೆ ಕೊಳಚೆ ನೀರು ಬರದಂತೆ ಮಣ್ಣುಹಾಕಿ ಮುಚ್ಚಿದ್ದಾರೆ. ಸ್ಥಳದಿಂದ ನಮ್ಮ ಪ್ರತಿನಿಧಿ ನವೀನ ನೀಡಿರುವ ವರದಿ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
17/09/2022 10:38 pm