ರಾಜಧಾನಿ ಬೆಂಗಳೂರಿನ ಅತ್ಯಂತ ದೊಡ್ಡ ಮಾರುಕಟ್ಟೆ, ಅತ್ಯಂತ ಪುರಾತನ ಮಾರುಕಟ್ಟೆ ಮತ್ತು ಅತ್ಯಂತ ಸುಪ್ರಸಿದ್ಧ ಮಾರುಕಟ್ಟೆ ಎಂಬ ಹೆಸರಿಗೆ ಭಾಜನವಾಗಿರುವ ಕೆ.ಆರ್. ಮಾರ್ಕೆಟ್ ನಲ್ಲಿ ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿಯ ವೈಭವಪೂರ್ಣ ಉತ್ಸವ ನಡೆಯುತ್ತಿದೆ. ಇಲ್ಲಿನ ವರ್ತಕರೆಲ್ಲಾ ಸೇರಿಕೊಂಡು ಪ್ರತೀವರ್ಷ ನೆರವೇರಿಸುವ ಈ ಅಣ್ಣಮ್ಮ ಉತ್ಸವ ಇಡೀ ಬೆಂಗಳೂರಿನಲ್ಲೇ ದೊಡ್ಡ ಉತ್ಸವ ಎಂಬ ಪ್ರತೀತಿಗೆ ಪಾತ್ರವಾಗಿದೆ.
ಉತ್ಸವಕ್ಕಾಗಿ ಇಡೀ ಕೆ.ಆರ್, ಮಾರುಕಟ್ಟೆಯನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಬಗೆಬಗೆಯ ಹಣ್ಣುಗಳು, ತರಕಾರಿಗಳು, ತೆಂಗು, ಬಾಳೆ, ಕಬ್ಬಿನ ಜಲ್ಲೆಗಳಿಂದ ಇಡೀ ಮಾರುಕಟ್ಟೆಯನ್ನು ಅಭೂತಪೂರ್ವ ಮಂಟಪವನ್ನಾಗಿಸಲಾಗಿದೆ.
ಶುಕ್ರವಾರ ಆರಂಭವಾಗಿರುವ ಉತ್ಸವ ಸೋಮವಾರದ ತನಕ ಮೂರುದಿನಗಳ ಪರ್ಯಂತ ನಡೆಯಲಿದೆ. ಪ್ರತೀದಿನ ಅನ್ನ ಸಂತರ್ಪಣೆ ನಡೆಯುತ್ತಿದೆ.. ಸೋಮವಾರ ಸಾಯಂಕಾಲ ಅಮ್ಮನವರ ವೈಭವಪೂರ್ಣ ಮೆರವಣಿಗೆ ನಡೆಯಲಿದೆ..
ವರದಿ - ಪ್ರವೀಣ್ ರಾವ್, ಬೆಂಗಳೂರು
PublicNext
17/09/2022 08:58 pm