ದೊಡ್ಡಬಳ್ಳಾಪುರ : ಒಮ್ಮೆ ಬೀಸಿದ ಬಿರುಗಾಳಿಗೆ 20 ಲಕ್ಷ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ, ಒಂದೂವರೆ ತಿಂಗಳಲ್ಲಿ ಕಟಾವ್ ಗೆ ಬರುತ್ತಿದ್ದ ಬಾಳೆ ಬಿರುಗಾಳಿಗೆ ಸಂಪೂರ್ಣ ನಾಶವಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಾಮನ ಅಗ್ರಹಾರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಕೆಂಪೇಗೌಡರು ತಮಗೆ ಸೇರಿದ 2 ಎಕರೆ 10 ಜಾಗದಲ್ಲಿ ಬಾಳೆ ಬೆಳೆದಿದ್ದರು. ಭರ್ಜರಿ ಫಸಲು ಬರುವ ನಿರೀಕ್ಷೆಯಂತೆ ಬಾಳೆ ಸಂವೃದ್ಧವಾಗಿ ಬೆಳೆದಿತ್ತು, ತೋಟವನ್ನ ನೋಡಿದ ಬಾಳೆಹಣ್ಣು ವ್ಯಾಪಾರಿಗಳು 15 ಲಕ್ಷಕ್ಕೆ ಕೊಳ್ಳಲು ಮುಂದಾಗಿದ್ರು.
ಒಂದೂವರೆ ತಿಂಗಳು ಕಳೆದ್ರೆ ಬಾಳೆ ಕಟಾವ್ ಗೆ ಬರುತ್ತಿತ್ತು, ಆವತ್ತಿನ ಮಾರುಕಟ್ಟೆಯ ಸಾಧಾರಣ ಬೆಲೆಗೆ 20 ಲಕ್ಷ ಆದಾಯ ಸಿಗುತ್ತಿತ್ತು, ಆದರೆ ನಿನ್ನೆ ಬೀಸಿದ ಬಿರುಗಾಳಿಗೆ ಇಡೀ ತೋಟ ಸಂಪೂರ್ಣ ನಾಶವಾಗಿದೆ. 2410 ಬಾಳೆ ಗಿಡಗಳಲ್ಲಿ ಕೇವಲ 100 ಗಿಡ ಮಾತ್ರ ಉಳಿದಿತ್ತು ಉಳಿದ ಗಿಡಗಳು ಮಧ್ಯಭಾಗಕ್ಕೆ ಮುರಿದು ನೆಲಕ್ಕುರುಳಿವೆ. ಲಾಭದ ನಿರೀಕ್ಷೆಯಲ್ಲಿದ್ದ ರೈತ ಕೆಂಪೇಗೌಡರಿಗೆ ಬಿರುಗಾಳಿ ಹೊಡೆತ ನೆಲಕಚ್ಚುವಂತೆ ಮಾಡಿದೆ. ಸರ್ಕಾರದಿಂದ ಪರಿಹಾರ ಸಿಕ್ಕರೆ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ನಿರೀಕ್ಷೆಯನ್ನಿಟ್ಟು ಕೊಂಡಿದ್ದಾರೆ.
Kshetra Samachara
19/04/2022 07:01 pm