ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಟಿ ಮೌಲ್ಯದ ಹಳ್ಳಿ ಕಾರ್ ಹೋರಿ

ವರದಿ - ಗಣೇಶ್ ಹೆಗಡೆ

ಬೆಂಗಳೂರು - ಅಬ್ಬಬ್ಬಾ ಅಂತಂದ್ರೆ ಲಕ್ಷದ ವರೆಗಿನ ಹೋರಿ ಮೌಲ್ಯದ ಬಗ್ಗೆ ಕೇಳಿದ್ದೀರಾ..! ಆದ್ರೆ ಈ ಸಲದ ಕೃಷಿ ಮೇಳದಲ್ಲಿ ಬರೋಬ್ಬರಿ ಕೋಟಿ ಮೌಲ್ಯದ ಹಳ್ಳಿಕಾರ್ ಹೋರಿ ಕಾಣಬಹುದು.

ಹೌದು...ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಳ್ಳಿಕಾರ್ ತಳಿಯ ಹೋರಿ ಬೆಲೆ 1 ಕೋಟಿ ರೂ. ಇದು ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಕೃಷ್ಣ ಎಂಬ ಹೆಸರಿನ ಹಳ್ಳಿಕಾರ್ ತಳಿಯ ಹೋರಿ ತಳಿ ಸಂವರ್ಧನೆಗೆ ವಿಶೇಷ ಮಾನ್ಯತೆ ನೀಡಲಾಗುತ್ತಿದೆ. ಇದರ ವೀರ್ಯಾಣು ಲಕ್ಷ - ಲಕ್ಷ‌ ಮೊತ್ತಕ್ಕೆ ಮಾರಾಟ ಆಗುತ್ತಿದೆ.

ಪಬ್ಲಿಕ್ ನೆಕ್ಸ್ಟ್ ಜತೆ ಹೋರಿ ಮಾಲೀಕ ಬೋರೇಗೌಡ ಮಾತನಾಡಿದ್ದು ಹಳ್ಳಿಕಾರ್ ಹೋರಿ ವಿಶೇಷತೆಯನ್ನು ವಿವರಿಸಿದರು.

ಇನ್ನೂ 3 ಲಕ್ಷ ಬೆಲೆ ಬಾಳುವ ದೊಡ್ಡಬಳ್ಳಾಪುರದ ಜಮುನಾ ಹೋರಿ, ಹೋತಗಳು, ವಿವಿಧ ತಳಿಯ ಕುರಿ ಕೋಳಿ ಮೀನು ಕೃಷಿ ಮೇಳದ ಪ್ರಾತ್ಯಕ್ಷಿಕೆಯಲ್ಲಿ ಕಾಣ ಬಹುದು.

Edited By : Nagesh Gaonkar
Kshetra Samachara

Kshetra Samachara

11/11/2021 04:28 pm

Cinque Terre

474

Cinque Terre

0