ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಮುರನಾಳ ಕೆರೆಯಲ್ಲಿ ಮೊಸಳೆ ಪತ್ತೆ

ಬಾಗಲಕೋಟೆ: ನಗರದ ಹೊರ ವಲಯ ಹೊಸ ಮುರನಾಳ ಕೆರೆಯಲ್ಲಿ ಏಕಾಏಕಿ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೆರೆಯಲ್ಲಿ ಮೊಸಳೆ ಬಂದಿದ್ದಕ್ಕೆ ಆತಂಕಗೊಂಡ ಗ್ರಾಮದ ಜನರಿಗೆ ಕೆರೆಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಗ್ರಾಮದಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೊಸಳೆಯನ್ನು ಬೇರೆಡೆ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಮೊಸಳೆಯನ್ನು ಬೇರೆಡೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಮೊಸಳೆ ಇಲ್ಲದ ಕೆರೆಯಲ್ಲಿ ಮೊಸಳೆ ತಂದು ಬಿಟ್ಟವರಾರು ಎಂದು ಗ್ರಾಮಸ್ಥರು‌ ಪ್ರಶ್ನಿಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

06/10/2022 07:45 pm

Cinque Terre

3.32 K

Cinque Terre

0