ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬಾವಿಗೆ ಬಿದ್ದ ಮೊಸಳೆಯನ್ನು ಸುರಕ್ಷಿತವಾಗಿ ಮೇಲೆತ್ತಿದ ಅರಣ್ಯ ಸಿಬ್ಬಂದಿ

ಏಕಾಏಕಿ ಬಾವಿಯಲ್ಲಿ ಕಾಣಿಸಿಕೊಂಡ 7 ಅಡಿ ಉದ್ದ ಬೃಹತ್ ಮೊಸಳೆ, ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿರು ಬೇಸಿಗೆ ಮಧ್ಯೆ ಕೃಷ್ಣಾ ನದಿಯಿಂದ ಆಹಾರ ಅರಸಿ ಬಂದ ಮೊಸಳೆ ಬಾವಿಯಲ್ಲಿ ಬಿದ್ದಿದೆ ಎನ್ನಲಾಗಿದೆ. ಸದಾಶಿವ ತೇಲಿ ಎಂಬುವವರಿಗೆ ಸೇರಿದ ತೋಟದ ಬಾವಿ ಇದಾಗಿದೆ. ಮೊಸಳೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗೆ ಸ್ಥಳೀಯ ಮೀನುಗಾರರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ದಾರೆ.

Edited By :
Kshetra Samachara

Kshetra Samachara

24/03/2022 11:18 am

Cinque Terre

14.96 K

Cinque Terre

0