ಬಾಗಲಕೋಟೆ: ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‌ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಅಸ್ಗರ್ ಅಲಿ, ಇರ್ಫಾನ್, ಮೊಹಮ್ಮದ್, ರಾಜೇಸಾಬ್ ಮುರ್ತುಜಾ, ಉಮರ್ ಫಾರೂಕ್ ಹಾಗೂ ಮುಸ್ತಾಫ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಪ್ರತಿಭಟನೆ ನೆಪದಲ್ಲಿ ಶಾಂತಿ ಕದಡಿದ ಆರೋಪ ಇವರ ಮೇಲಿತ್ತು ಎನ್ನಲಾಗಿದೆ.
PublicNext
27/09/2022 08:45 am