ಬಾಗಲಕೋಟೆ:ಕೆರೂರ ಚಲೋ ವಿರುದ್ಧವಾಗಿ ಕುಳಗೇರಿ ಕ್ರಾಸ್ ನಿಂದ ಆರಂಭವಾಗಬೇಕಿದ್ದ ಸೌಹಾರ್ದತಾ ನಡಿಗೆಗೆ ಬ್ರೇಕ್ ಬಿದ್ದಿದೆ.
ಸೌಹಾರ್ದತಾ ನಡಿಗೆಗೆ ಮುಂದಾದವರನ್ನು ಪೊಲೀಸರು ಪಾದಯಾತ್ರೆ ಆರಂಭಗೊಳ್ಳುತ್ತಿದ್ದಂತೆ ಅವರನ್ನೆಲ್ಲ ವಶಕ್ಕೆ ಪಡೆದಿದ್ದಾರೆ.
ಭಾರತೀಯ ಶರಣ ಸೇನಾ ಜಿಲ್ಲಾ ಘಟಕದ ವತಿಯಿಂದ ಕುಳಗೇರಿ ಕ್ರಾಸ್ ನಿಂದ ಸೌಹಾರ್ದತಾ ನಡಿಗೆ, ಕೆರೂರ ಕಡೆಗೆ ಶಿರ್ಷಿಕೆಯಡಿ ಪಾದಯಾತ್ರೆ ಆರಂಭವಾಗಿತ್ತು. ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ನೇತೃತ್ವ ವಹಿಸಿದ್ದರು. ನಡಿಗೆಗೆ ಬ್ರೇಕ್ ಹಾಕಿ, ಪ್ರತಿಭಟನಾಕಾ ರರನ್ನು ಬಾದಾಮಿ ಪೋಲಿಸರು ವಶಕ್ಕೆ ಪಡೆದಿದ್ದಾರೆ
ಕೆರೂರ :ಹಿಂಜಾವೇ ಶೋಭಾಯಾತ್ರೆ ಆರಂಭ
ಶೋಭಾ ಯಾತ್ರೆ : ಹಿಂಜಾವೆ ಆಯೋಜಿಸಿದ್ದ ಶೋಬಾ ಯಾತ್ರೆ ಕೆರೂರ ಪಟ್ಟಣದ ಶ್ರೀ ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾಯಿತು.
ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂಜಾವೇ ಕಾರ್ಯಕರ್ತರು,ಅಭಿಮಾನಿಗಳು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಆನಂದ ಮುತ್ತಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಕಿರಣ ಪವಾಡಶೆಟ್ಟರ ಸೇರಿದಂತೆ ಮಹಿಳೆಯರು ಇದ್ದರು.
Kshetra Samachara
19/09/2022 02:18 pm