ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಎರಡು ಸಂಘಟನೆಗಳಿಂದ ಕೆರೂರ ಚಲೋ; ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಕಟ್ಟೆಚ್ಚರ

ಬಾಗಲಕೋಟೆ: ಹಿಂದೂ ಸಂಘಟನೆಗಳ ಯುವಕರ ಮೇಲೆ ಪೋಲಿಸರ ದೌರ್ಜನ್ಯ ಖಂಡಿಸಿ ಕೆರೂರ ಚಲೋ ಹಿನ್ನೆಲೆಯಲ್ಲಿ ಕೆರೂರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪಟ್ಟಣದಾದ್ಯಂತ ಪೊಲೀಸ್ ಪಹರೆ ನಡೆಯುತ್ತಿದೆ. ಮದ್ಯಾಹ್ನ 12 ಗಂಟೆಗೆ ಶೋಭಾಯಾತ್ರೆ ರಾಚೋಟೇಶ್ವರ ದೇವಸ್ಥಾನದಿಂದ ಕಾಯಿಪಲ್ಲೆ ಮಾರ್ಕೆಟ್‌ವರೆಗೆ ನಡೆಯಲಿದ್ದು, ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಲಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬಳಿಕ ಹಿಂದೂ ಮುಖಂಡ ಜಗದೀಶ ಕಾರಂತ ನೇತೃತ್ವದಲ್ಲಿ ಬಹಿರಂಗ ಭಾಷಣ ನಡೆಯಲಿದೆ.

ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ಸೌಹಾರ್ದ ನಡಿಗೆ ಪಾದಯಾತ್ರೆ ಕೂಡ ನಡೆಯಲಿದೆ. ಯಾತ್ರೆ ಕುಳಗೇರಿ ಕ್ರಾಸ್‌ನಿಂದ ಆರಂಭಗೊಂಡು ಮಧ್ಯಾಹ್ನ ಹೊತ್ತಿಗೆ ಕೆರೂರ ಅಂಬೇಡ್ಕರ್ ಸರ್ಕಲ್‌ಗೆ ಆಗಮಿಸಲಿದೆ. ಹಿಂಜಾವೇ ಕೆರೂರ ಚಲೋಗೆ ಪರ್ಯಾಯ ಎನ್ನುವಂತೆ ಸೌಹಾರ್ದ ನಡಿಗೆ ನಡೆಯುತ್ತಿದೆ.

ಏತನ್ಮಧ್ಯೆ ಪೊಲೀಸರು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. 5 ಕೆಎಸ್ಆರ್‌ಪಿ, 9 ಡಿಎಆರ್, 9 ಸಿಪಿಐ, 15 ಪಿಎಸ್ಐ, 25 ಎಎಸ್ಐ ಸೇರಿದಂತೆ 300ಕ್ಕೂ ಅಧಿಕ ಪೋಲಿಸ್‌ ಸಿಬ್ಬಂದಿ ನಿಯೋಜನೆ ಆಗಿದೆ. ಈಗಾಗಲೇ ಪೊಲೀಸರು ತಡರಾತ್ರಿ ಪಟ್ಟಣದಲ್ಲಿ ಪೊಲೀಸ್ ಪಥಸಂಚಲನ ಕೂಡ ನಡೆಸಿದ್ದಾರೆ.

Edited By : Shivu K
PublicNext

PublicNext

19/09/2022 09:50 am

Cinque Terre

25.89 K

Cinque Terre

0