ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಹಿರಿಯ ನಾಗರಿಕರ ಪ್ರತ್ಯೇಕ ವಾರ್ಡಗೆ ಚರಂತಿಮಠ ಚಾಲನೆ

ಬಾಗಲಕೋಟೆ: ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಪ್ರಾರಂಭಿಸಲಾದ 10 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ ಕಾರ್ಯಾರಂಭಕ್ಕೆ ಶಾಸಕ ವೀರಣ್ಣ ಚರಂತಿಮಠ ಶನಿವಾರ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು ಹಿರಿಯ ನಾಗರಿಕರಿಗಾಗಿ ಪ್ರಾರಂಭಿಸಲಾದ ಪ್ರತ್ಯೇಕ ವಾರ್ಡನಲ್ಲಿ 10ಹಾಸಿಗೆಗಳಿದ್ದು, ಅದರಲ್ಲಿ 5 ಪುರುಷರಿಗೆ, 5 ಮಹಿಳೆಯರಿಗೆ ಮೀಸಲಿರಿಸಲಾಗಿದೆ. ವಾರ್ಡಗೆ ಇಬ್ಬರು ವೈದ್ಯಾಧಿಕಾರಿಗಳು, 6 ಜನ ಸ್ಟಾಪ್ ನರ್ಸ, ೪4 ಜನ ಡಿ ಗ್ರೂಪ್ ಸಿಬ್ಬಂದಿ ನೇಮಿಸಲಾಗಿದೆ. ಒಬ್ಬರು ಫಿಜೋಯೊ ಥೆರಪಿ ತಜ್ಞರನ್ನು ನೇಮಿಸಬೇಕಾಗಿದೆ ಎಂದರು.

ಎನ್.ಪಿ.ಎಚ್.ಸಿ.ಇ ಯೋಜನೆಯಡಿ ಪ್ರತ್ಯೇಕ ವಾರ್ಡ ಪ್ರಾರಂಭಿಸಲಾಗಿದ್ದು, ರೋಗಿಗಳಿಗೆ ಶೌಚಾಲಯಕ್ಕೆ ಹೋಗಿ ಬರಲು ಅನುಕೂಲವಾಗುವಂತೆ ವಾರ್ಡನ ಗೋಡೆಗಳಿಗೆ ರೇಲಿಂಗ್ ಮಾಡಿಸಲಾಗಿದೆ. ಇದರಿಂದ ರೇಲಿಂಗ್ ಹಿಡಿದುಕೊಂಡು ನಡೆದಾಡಲು ಅನುಕೂಲವಾಗಲಿದೆ. ವಾರ್ಡನಲ್ಲಿ ಸ್ವಚ್ಚತೆ ಕಾಪಾಡುವ ಜತೆಗೆ ಶೌಚಾಲಯ ಸ್ವಚ್ಛವಾಗಿಟ್ಟುಕೊಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

01/10/2022 05:26 pm

Cinque Terre

4.02 K

Cinque Terre

0