ಬಾಗಲಕೋಟೆ: ಕೈಗಾರಿಕೆ ಮತ್ತು ವಿಮಾನ ನಿಲ್ದಾಣಕ್ಕಾಗಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಬೃಹತ್ ಪಾದಯಾತ್ರೆ ನಡೆಸಿದರು.
ಹಲಕುರ್ಕಿ ಗ್ರಾಮದಿಂದ ಬಾದಾಮಿ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ರೈತರು, ಚಕ್ಕಡಿ, ಟ್ರ್ಯಾಕ್ಟರ್, ಜನಾವಾರು ಸಮೇತ ಆಗಮಿಸಿದ್ದರಿಂದ ಸಂಚಾರಕ್ಕೆ ತೊಂದರೆ ಆಯಿತು. ಈ ವೇಳೆ ಪ್ರತಿಭಟನಾಕಾರರು ಸಚಿವ ಮುರುಗೇಶ ನಿರಾಣಿ ಮತ್ತು ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಮುರುಗೇಶ ನಿರಾಣಿ ಅವರು ವಿಮಾನ ನಿಲ್ದಾಣಕ್ಕಾಗಿ ಹಲಕುರ್ಕಿ ಗ್ರಾಮ ವ್ಯಾಪ್ತಿಯಲ್ಲಿನ ಭೂಸ್ಚಾಧೀನ ಕೈಬಿಡಬೇಕು ಎನ್ನುವ ವಿಷಯ ಬೆಂಬಲಿಸಿ ಕೆಪಿಸಿಸಿ (ಹಿಂ.ವ.ವಿ) ರಾಜ್ಯ ಕಾರ್ಯದರ್ಶಿ ಮಹೇಶ ಎಸ್ ಹೊಸಗೌಡ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಪರ ಬೆಂಬಲ ಸೂಚಿಸಿದರು.
ಮುಖಂಡರಾದ ಬಿ.ಎನ್.ಖೋತ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳ ಪದಾಧಿಕಾರಿಗಳು, ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟ್ರಾಫಿಕ್ ಜಾಮ್: ರೈತರು ಬಾದಾಮಿ ಪಟ್ಟಣದ ರಾಮದುರ್ಗ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರಣ ಬಸ್ ನಿಲ್ದಾಣದಿಂದ ರಾಮದುರ್ಗ ಸರ್ಕಲ್‌ವರೆಗೆ ಟ್ರಾಫಿಕ್ ಜಾಮ್ ಆಗಿ ರಸ್ತೆ ಸಂಚಾರ ಬಂದ್ ಆದ ಕಾರಣ ಪ್ರಯಾಣಿಕರು, ಬೈಕ್ ಸವಾರರು ಪರದಾಡಿದರು.
Kshetra Samachara
03/10/2022 07:42 pm