ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕಾರ್ಖಾನೆ ತ್ಯಾಜ್ಯ ಸಾಧಕ-ಬಾಧಕ ಆಲಿಕೆ ಸಭೆ

ಬಾಗಲಕೋಟೆ: ಬಾದಾಮಿ ಶುಗರ್ಸ ಕಾರ್ಖಾನೆ ಆವರಣದಲ್ಲಿ ಕಾರ್ಖಾನೆ ತ್ಯಾಜ್ಯ ಸಾಧಕ-ಬಾಧಕ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಆಲಿಕೆ ಸಭೆ ಮಂಗಳವಾರ ಜರುಗಿತು.

ಬಾದಾಮಿ-ರಾಮದುರ್ಗ ರಸ್ತೆಯ ಬಾದಾಮಿ ಶುಗರ್ಸ ಈ ಹಿಂದೆ ನಿರ್ವಹಿಸುತ್ತಿರುವ ಕಾರ್ಯಕ್ಕಿಂತ ಸಕ್ಕರೆ ಘಟಕದ ಸಾಮರ್ಥ್ಯವನ್ನು ಪ್ರತಿದಿನ 2500 ಟನ್‌ನಿಂದ 5 ಸಾವಿರ ಟನ್ ವರೆಗೆ ಹೆಚ್ಚಿಸಿದ್ದರಿಂದ ಹೊಸ 200 ಕೆಎಲ್‌ಡಿಪಿ ಸಾಮರ್ಥ್ಯದ ಡಿಸ್ಟಲರಿ ಘಟಕವನ್ನು ಸ್ಥಾಪಿಲು ಉದ್ದೇಶಿಸಿದ್ದರಿಂದ ಪರಿಸರ ಮೇಲೆ ಉಂಟಾಗುತ್ತಿರುವ ಸಾಧಕ-ಬಾಧಕ ಕುರಿತು ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಆಲಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಜೆ.ಬಿ.ಮಜ್ಜಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಜಶೇಖರ ಪುರಾಣ ಕ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಕಾರ್ಖಾನೆ ಆಡಳಿತ ಮಂಡಳಿಯವರು, ಜನಪ್ರತಿನಿಧಿಗಳು, ಸಾರ್ವಜನಿಕರು, ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

20/09/2022 08:18 pm

Cinque Terre

4.06 K

Cinque Terre

0