ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡದ ಅಶೋಕ ಹೆಗಡಿ ಅವರ ನಿವಾಸದಲ್ಲಿ ನಾಡಿನ ಸಂಸ್ಕೃತಿ, ಪರಂಪರೆ ಸಾರುವ ದಸರಾ ಬೊಂಬೆಗಳ ಪ್ರದರ್ಶನಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಭೇಟಿ ನೀಡಿದರು.
ಅಶೋಕ ಹೆಗಡಿ ಅವರ ಮನೆಯಲ್ಲಿ ದುರ್ಗಾದೇವಿ, ಪರಮೇಶ್ವರಿ, ಸರಸ್ವತಿ, ನವದೇವತೆಗಳು, ಜೀವನದ ಪ್ರತಿ ಹಂತದ ವಿವಿಧ ಮೂರ್ತಿಗಳನ್ನು ಇಟ್ಟು ದಸರಾ ಗೊಂಬೆಗಳ ಹಬ್ಬ ಆಚರಿಸಲಾಗುತ್ತದೆ. ಇದು ಈಗ ಪ್ರತಿಯೊಬ್ಬರ ಆಕರ್ಷಣೀಯ ಕೇಂದ್ರವಾಗಿದೆ. ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಜನತೆ ಮನೆಗೆ ಬಂದು ಗೊಂಬೆಗಳ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ದಸರಾ ಆಯುದ್ಧ ಪೂಜೆ ನಿಮಿತ್ತ ಮುಖಂಡರು ಅವರ ಕುಟುಂಬದವರಿಗೆ ವಿಜಯದಶಮಿ ಹಬ್ಬದ ಶುಭಾಶಯ ಕೋರುತ್ತಿದ್ದಾರೆ.
Kshetra Samachara
05/10/2022 08:45 pm