ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆಯಲ್ಲಿ 14 ರಂದು ಸಿಂಧೂರ ಚಲನಚಿತ್ರ ಬಿಡಗಡೆ ಸಮಾರಂಭ

ಬಾಗಲಕೋಟೆ: ಸಿಂಧೂರ ಚಲನಚಿತ್ರ ಬಿಡುಗಡೆ ಸಮಾರಂಭ ಅ.14 ರಂದು ಬಾಗಲಕೋಟೆಯ ವಾಸವಿ ಚಿತ್ರಮಂದಿರದಲ್ಲಿ ನಡೆಯಲಿದೆ ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ಸಚೀನ ಪುರೋಹಿತ ಹೇಳಿದರು.

ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರಗಳನ್ನು ಎಲ್ಲರೂ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುತ್ತಾರೆ. ನಾವು ಮಾತ್ರ ಬಾಗಲಕೋಟೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ನಾನು ಬಾಗಲಕೋಟೆ ಮಗ. ನಮ್ಮ ತಂದೆಯವರಿಗೆ ಅಚ್ಷು ಮೆಚ್ಚು. ಹಾಗಾಗಿ ಇಲ್ಲಿ ಚಿತ್ರ ಬಿಡುಗಡೆ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದರು.

ಅಂತರ್ ಜಾತಿ ವಿವಾಹ ಮತ್ತು ವೈಯಕ್ತಿಕ ಪ್ರತಿ ಸುತ್ತ ಚಿತ್ರಕಥೆ ಇದೆ ಎಂದ ಅವರು ಚಿತ್ರದ ಪೊಸ್ಟರ್ ಗಳನ್ನು ಚಿತ್ರತಂಡದೊಂದಿಗೆ ಬಿಡುಗಡೆಗೊಳಿಸಿದರು.

Edited By : Somashekar
PublicNext

PublicNext

06/10/2022 02:24 pm

Cinque Terre

25.37 K

Cinque Terre

0