ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2021 ರ ಮನಕಲಕಿದ ಪಬ್ಲಿಕ್ ನೆಕ್ಸ್ಟ್ ಮೆಲಕುಗಳು

ಐದನೆ ವರ್ಷದಲ್ಲಿ ಮುನ್ನಡೆದಿರುವ ನಿಮ್ಮ PublicNext ಮಾಧ್ಯಮ ಇಂದು ರಾಜ್ಯದ ಸಹೃದಯಿ ಓದುಗರ ಮನೆಮಾತು. ದಿನಪತ್ರಿಕೆಗಳಲ್ಲಿ ನಾಳೆ ಕಾಣುವ ದೇಶ, ವಿದೇಶ, ರಾಜ್ಯ, ಸ್ಥಳೀಯ ಸುದ್ದಿಗಳು ಇಂದೆ ಈ ಕ್ಷಣದಲ್ಲಿಯೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ದಲ್ಲಿ ಲಭ್ಯ.

ಕೇವಲ ಸುದ್ದಿಗಳನ್ನು ನೀಡುವುದಲ್ಲ ನಾವು ಬರೆಯುವ ಪ್ರತಿಯೊಂದು ಸುದ್ದಿ, ವಿಶೇಷ ವರದಿಗಳು ಸಮಾಜಮುಖಿಯಾಗಿರಬೇಕು, ನಾವು ಬೆಳಕಿಗೆ ತರುವ ಸಮಸ್ಯೆಗಳಿಗೆ ಸ್ಥಳೀಯ ಆಡಳಿತ ಸ್ಪಂದಿಸಬೇಕು, ಪರಿಹಾರ ಒದಗಿಸಬೇಕು ಎಂಬುದೆ ನಮ್ಮ ಉದ್ದೇಶ. ಅದರಲ್ಲಿ ನಾವು ಬಹುತೇಕ ಸಫಲರಾಗಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಪಬ್ಲಿಕ್ ನೆಕ್ಸ್ಟ್ ದಲ್ಲಿಯ ವರದಿಗಳಿಂದಾಗಿ ಸಮಾಜ ಹಾಗೂ ಸರಕಾರದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. ವಿಡಿಯೋ ವರದಿಗಳೊಂದಿಗೆ ಓದುಗರನ್ನು ತಲುಪುತ್ತಿರುವ ಪಬ್ಲಿಕ್ ನೆಕ್ಸ್ಟ್ ಇಂದು ರಾಜ್ಯದಲ್ಲಿ ಪ್ರಭಾವಿ ಮಾಧ್ಯಮವಾಗಿ ಬೆಳದು ನಿಂತಿದೆ. ನಮ್ಮ ಇಂಪ್ಯಾಕ್ಟ್ ಸ್ಟೋರಿಗಳ ಝಲಕ್ ಇಲ್ಲಿದೆ.

ಬಡತನದ ಬೇಗೆಯಲ್ಲಿ ಬೆಂದಿರುವ, ಆರ್ಥಿಕ ಮುಗ್ಗಟ್ಟಿನಿಂದಾಗಿ ಚಿಕಿತ್ಸೆಗಾಗಿ ಪರದಾಡುತ್ತಿರುವ, ಕುಟುಂಬದ ಸದಸ್ಯರಿಂದ ತಿರಸ್ಕಾರಕ್ಕೊಳಗಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಅನೇಕರಿಗೆ ಧ್ವನಿಯಾಗಿ, ಸಾರ್ವಜನಿಕರಿಂದ ಲಕ್ಷಾಂತರ ರೂ ಸಂಗ್ರಹಿಸಿ ಸಹಾಯ ಒದಗಿಸಿಕೊಟ್ಟ ತೃಪ್ತಿ ನಮಗಿದೆ. ಮಳೆಯಿಂದ ಮನೆ ಕಳೆದುಕೊಂಡ ಓರ್ವ ಅಂಗವಿಕಲ ಸಹೋದರಿಯ ದಾರುಣ ಪರಿಸ್ಥಿತಿಯನ್ನು ಸರಕಾರದ ಗಮನಕ್ಕೆ ಸೆಳೆದು ಆಕೆಗೆ ಸೂರು ಒದಸಿಕೊಟ್ಟ ಧನ್ಯತಾ ಭಾವ ನಮಗಿದೆ.

ಬೆಣ್ಣೆಹಳ್ಳ ಪ್ರವಾಹದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಟ್ಟಿದ್ದು, ಕುಸುಗಲ್ ರಸ್ತೆಯ ಸಿ.ಎ ನಿವೇಶನ ಕಬಳಿಕೆ ಮೇಲೆ ಬೆಳಕು ಚೆಲ್ಲಿ ಅದನ್ನು ಪಾಲಿಕೆ ತನ್ನ ವಶಕ್ಕೆ ಪಡೆದುಕೊಂಡಿದ್ದು ಹೀಗಿ ಅನೇಕ ಜನೋಪಯೋಗಿ ವರದಿಗಳು ಮೆಲಕು ಹಾಕುವಂತಹವು. ಇಂತಹ ನೂರಾರು ವರದಿಗಳನ್ನು ನಾವು ಉದಾಹರಿಸಬಹುದು.

Edited By : Nagesh Gaonkar
PublicNext

PublicNext

31/12/2021 07:29 pm

Cinque Terre

102.63 K

Cinque Terre

4

ಸಂಬಂಧಿತ ಸುದ್ದಿ