ಇಂದು ನೀವು ಸೋಷಿಯಲ್ ಮೀಡಿಯಾಗಳಲ್ಲಿ ಗಮನಿಸಿರುತ್ತಿರಾ ಫೇಸ್ಬುಕ್, ವಾಟ್ಸಾಪ್, ಇನಷ್ಟಾಗ್ರಾಮ್ ಕಪಲ್ ಚಾಲೇಂಜ್ ಮಾಡ್ತಾ ತಮ್ಮ ಪತಿ-ಪತ್ನಿ ಜೊತೆಗಿರುವ ಪೋಟೋ ಅಪ್ಡೇಟ್ ಮಾಡಿ ದಂಪತಿಗಳು ಸಂತಸ ಪಟ್ರೇ ಇತ್ತ ಸಿಂಗಲ್ಸ್ ಇರೋ ಯುವಕರ್ರೂ ಸಿಂಗಲ್ಸ್ ಚಾಲೇಂಜ್ ಕೈಗೊಂಡಿದ್ದಾರೆ.
ಈ ಬೆಳೆವಣಿಗೆ ಗಮನಿಸುವುದಾರೇ ಸೋಷಿಯಲ್ ಮೀಡಿಯಾ ಕಪಲ್ಸ್ ಆನಂದ ಜೊತೆ ಸಿಂಗಲ್ಸ್ ಗಳಿಗೆ ಬೇಜಾರ ಮಾಡ್ತಿದೆ ಎಂಬ ಮಾತು ಕೇಳಿ ಬರ್ತಿವೆ. ಆದರೆ ದಂಪತಿಗಳ ಪೋಟೋಗಳು ಆಲ್ಬ್ ಬಿಟ್ಟು ಹೊರಬಂದು ಹಳೆಯ ಆನಂದವನ್ನ ಮೆಲುಕು ಹಾಕ್ತಿರೋದು ಸಂತಸದ ವಿಷಯ.
ಮುಖ್ಯವಾಗಿ ಕಪಲ್ ಚಾಲೇಂಜ್ ಒಳಗೆ ಆಧುನಿಕ ದಂಪತಿಗಳ ಪೋಟೋ ತೂಗು ಹಾಕಿಕೊಂಡಿವೆ ವಿನಃ ಮೂವತ್ತು ನಲವತ್ತು ವರ್ಷ ಸಂಸಾರ ನೂಕಿರುವ ಬಿಳಿ ಪೈಜಾಮ್ ತಲೆ ಮೇಲೆ ಸೆರಗಿನ ಅವರ ತಂದೆ ತಾಯಿ ಗ್ರೇಟ್ ಮುಖಗಳು ಕಾಣ್ತಾಯಿಲ್ಲಾ, ಇತ್ತ ಸಿಂಗಲ್ ನಾವು ಸಿಂಗಲ್ಸ್ ಎಂದು ಹಾಸ್ಯದ ಜೊತೆ ವಿಡಂಬನೆ ಎಂಬಂತೆ ಸಿಂಗಲ್ಸ್ ಡೇ ಬದಲಾಗಿ ನಿಮ್ಮ ತಂದೆ ತಾಯಿಗಳ ಪೋಟೋ ಹಾಕಿ ಕಪಲ್ಸ್ ಡೇ ಕಂಪ್ಲೀಟ್ ಮಾಡದೆ ಇರೋದಕ್ಕೆ ಏನೆನ್ನ ಬೇಕು.
ಕಪಲ್ಸ್ ಡೇ ದಂಪತಿಗಳ ಸೋಷಿಯಲ್ ಮೀಡಿಯಾ ಸಾಲಿನಲ್ಲಿ ಅದೆಲ್ಲೋ ಮೂಲೆಯ ಟ್ರಂಕ್ ಅಲ್ಲಿ ಬಿದ್ದಿರುವ ಅಪ್ಪ ಅಮ್ಮನ ದಿ ಗ್ರೇಟ್ ಬ್ಲಾಕ್ ಅಂಡ್ ವೈಟ್ ಕಪಲ್ ಪೋಟೋ ಮಿಸ್ ಆಗದಿರಲಿ.
PublicNext
22/09/2020 04:39 pm