ಬೆಂಗಳೂರು : ಕೃಷಿ ವಿಧೇಯಕಗಳ ವಿರುದ್ಧ ರೈತ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿವೆ.
31 ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಪಂಜಾಬ್ ನಲ್ಲಿ ಸಂಪೂರ್ಣ ಬಂದ್ ಆಚರಿಸಲು ನಿರ್ಧರಿಸಲಾಗಿದೆ.
ಇತ್ತ ರಾಜ್ಯದಲ್ಲೂ ಎಇಎಂಸಿ, ಭೂಸುಧಾರಣಾ ಕಾಯ್ದೆ ಸುಗ್ರೀವಾಜ್ಞೆ ವಿರುದ್ಧ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.
ಆದ್ರೆ ರೈತರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದೇ ಇರುವುದನ್ನ ವಿರೋಧಿಸಿ ಇಂದು ಅನ್ನದಾತರು ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.
ಐಕ್ಯ ಹೋರಾಟ ಸಮಿತಿಯಿಂದ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿರೊ ಅನ್ನದಾತರು, ಜೈಲ್ ಭರೋ ಚಳುವಳಿ ಕೂಡ ನಡೆಸಲಿದ್ದಾರೆ.
ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಲ್ಲಿ ರಸ್ತೆ ತಡೆ ಹೋರಾಟ ಇರಲಿದೆ.
ಇನ್ನು, ರೈತ ಸಂಘಟನೆಗಳಿಂದ ಇಂದು ಹೆದ್ದಾರಿ ತಡೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ 8ನೇ ಮೈಲಿ ನವಯುಗ ಟೋಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
PublicNext
25/09/2020 08:23 am