ದಾವಣಗೆರೆ: ಕೆಂಡ ಹಾಯುವ ವೇಳೆ ಆಯತಪ್ಪಿ ಭಕ್ತರೊಬ್ಬರು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ನಡೆದಿದೆ.
ಚನ್ನಪ್ಪಸ್ವಾಮಿ ರಥೋತ್ಸವ, ವಿರಭದ್ರೇಶ್ಬರ ಕೆಂಡದಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು. ಈ ವೇಳೆ ಭಕ್ತರೊಬ್ಬರು ಬೆಂಕಿ ತುಳಿದು ಕಾಲು ಜಾರಿ ಪಕ್ಕದಲ್ಲಿ ಬಿದ್ದರು. ಕೂಡಲೇ ಅಲ್ಲಿದ್ದವರು ಮೇಲಕ್ಕೆ ಎತ್ತಿದರು.
ಪ್ರತಿ ಶ್ರಾವಣ ಮಾಸದ ಕೊನೆಯ ಶುಕ್ರವಾರ ಚನ್ನಪ್ಪಸ್ವಾಮಿ ರಥೋತ್ಸವ ನಡೆಯುತ್ತೆ. ಈ ವೇಳೆ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ಕೂಡ ನಡೆಸಲಾಯುತ್ತದೆ. ಪಲ್ಲಕ್ಕಿ ಹೊತ್ತುಕೊಂಡು ಕೆಂಡ ಹಾಯಲಾಗುತ್ತದೆ. ಮಹಿಳೆಯರು ಕೂಡ ಕೆಂಡ ಹಾಯ್ದು ಭಕ್ತಿ ಸಮರ್ಪಣೆ ಮಾಡಿದರು.
ಇನ್ನು ಜಿಲ್ಲಾಡಳಿತ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಹೆಚ್ಚು ಜನರು ಗುಂಪುಗೂಡಬಾರದು ಎಂಬ ಆದೇಶ ಹೊರಡಿಸಿದ್ದರೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ಕ್ಷೇತ್ರದಲ್ಲಿ ಕೋವಿಡ್ ಉಲ್ಲಂಘನೆ ಮಾಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಭಕ್ತರು ರಥೋತ್ಸವ ನಡೆಸಿದರು.
PublicNext
03/09/2021 04:19 pm