ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಮಾಂಸಾಹಾರಿಯೇ? - ಅನುಮಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ

ನವದೆಹಲಿ: ತಮ್ಮ ಬಾಲ್ಯದ ದಿನಗಳಲ್ಲಿ ಈದ್ ಹಬ್ಬದಂದು ಮುಸ್ಲಿಂ ಮನೆಗಳಿಂದ ಆಹಾರ ಬಂದಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಡಿರುವ ಮಾತುಗಳು ಅನುಮಾನವನ್ನು ಮೂಡಿಸಿದೆ.

ಪ್ರಚಾರದ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈದ್‌ ಸಮಯದಲ್ಲಿ ಮುಸ್ಲಿಮರು ಆಹಾರ ಕಳುಹಿಸುತ್ತಿದ್ದರು ಎಂದಿದ್ದಾರೆ. ಹಾಗಾದರೆ ನೀವು ಸಸ್ಯಾಹಾರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಿಜವಾಗಿಯೂ? ಇದರರ್ಥ ನೀವು ಸಸ್ಯಾಹಾರಿ ಅಲ್ಲ ಎಂದು ಅರ್ಥವೇ? ನೀವು ಸಸ್ಯಾಹಾರಿ ಎಂದು ದೇಶದ ಜನರಿಗೆ 24 ಗಂಟೆ ಹೇಳುತ್ತೀರಿ. ಆದರೆ ನಂತರ ನೀವು ಈದ್ ಸಮಯದಲ್ಲಿ ನಿಮಗೆ ಕಳುಹಿಸಿದ ಆಹಾರವನ್ನು ಸೇವಿಸುತ್ತಿದ್ದಿರಿ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಈಗ ಹೊಸ ನರೇಂದ್ರ ಮೋದಿ ಬಂದಿದ್ದಾರೆ. ಇವರಿಗೆ ತಾವು ಸೋಲುತ್ತೇವೆ ಎಂದು ತಿಳಿದಿದೆ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಕುಟುಕಿದರು.

ನಾನು ನರೇಂದ್ರ ಮೋದಿ ಅವರೊಂದಿಗೆ ಯಾವಾಗ ಬೇಕಾದರೂ, ಎಲ್ಲಿಯಾದರೂ ಡಿಬೆಟ್ ಮಾಡಲು ಸಿದ್ಧನಿದ್ದೇನೆ. ಆದರೆ ನರೇಂದ್ರ ಮೋದಿ ಬರುತ್ತಾರೆಯೇ? ಅವರಿಗೆ ನನ್ನದೊಂದು ಪ್ರಶ್ನೆಯಿದೆ. ಅದಾನಿ ಅವರೊಂದಿಗೆ ಮೋದಿ ಸಂಬಂಧವೇನು? ಸರ್ಕಾರದ ಎಲ್ಲಾ ಗುತ್ತಿಗೆಯನ್ನು ಅದಾನಿಗೆ ಯಾಕೆ ನೀಡಿದ್ದೀರಿ ಎಂದು ಪ್ರಶ್ನಿಸುತ್ತೇನೆ. ಅದಾದ ಬಳಿಕ ನರೇಂದ್ರ ಮೋದಿ ಅವರನ್ನು ಚುನಾವಣಾ ಬಾಂಡ್‌ಗಳ ಬಗ್ಗೆ ಪ್ರಶ್ನಿಸುತ್ತೇನೆ. ಈ ಪ್ರಶ್ನೆಗೆ ಅವರಿಗೆ ಉತ್ತರಿಸಲಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

20/05/2024 02:44 pm

Cinque Terre

38.42 K

Cinque Terre

13

ಸಂಬಂಧಿತ ಸುದ್ದಿ