ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2024ರಲ್ಲಿ ಆಕರ್ಷಕ ಕ್ಯಾಚ್‌ಗಳನ್ನು ಹಿಡಿದ ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್

ಹೈದರಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ 57 ನೇ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್‌ನ ನಿತೀಶ್ ಕುಮಾರ್ ರೆಡ್ಡಿ ಮತ್ತು ಸನ್ವೀರ್ ಸಿಂಗ್ ಅವರು ಕ್ವಿಂಟನ್ ಡಿ ಕಾಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಲು ಅದ್ಭುತ ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2024ರ 57ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡವು ಕೇವಲ 9.4 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೆ 167 ರನ್‌ ಗಳಿಸಿ ಜಯ ಸಾಧಿಸಿದೆ. ಹೈದರಾಬಾದ್‌ ಪರ ಅಭಿಷೇಕ್ ಶರ್ಮಾ 75* ರನ್‌ ಹಾಗೂ ಟ್ರಾವಿಸ್ ಹೆಡ್ 89* ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Edited By : Vijay Kumar
PublicNext

PublicNext

08/05/2024 10:56 pm

Cinque Terre

149.5 K

Cinque Terre

0

ಸಂಬಂಧಿತ ಸುದ್ದಿ