ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ - ವೈದ್ಯರಿಬ್ಬರು ಪವಾಡಸದೃಶ ಪಾರು

ಉಳ್ಳಾಲ: ನಿಯಂತ್ರಣ ತಪ್ಪಿರುವ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ವಿದ್ಯುತ್ ಕಂಬದ ಸಲಾಕೆಗಳು ಕಾರಿನೊಳಗೆ ನುಗ್ಗಿದ ಘಟನೆ ನಗರದ ಕುತ್ತಾರು ಸಮೀಪದ ಬಬ್ಬುಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ವೈದ್ಯರಿಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ತಡರಾತ್ರಿ ತೊಕ್ಕೊಟ್ಟಿನಿಂದ ಕುತ್ತಾರಿನೆಡೆಗೆ ತೆರಳುತ್ತಿದ್ದ ಈ ಕಾರು ಬಬ್ಬುಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿದು ಪಲ್ಟಿಯಾಗಿದೆ. ಈ ಕಾರಿನಲ್ಲಿ ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕೇರಳ ಮೂಲದ ವೈದ್ಯರಿಬ್ಬರು ಇದ್ದರೂ, ಅವರಿಬ್ಬರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬವು ಹೊಂಡದಿಂದಲೇ ಹೊರಬಂದು ಮುರಿದು ಬಿದ್ದಿದೆ. ಕಂಬದ ಒಂದು ತುದಿಯು ಸಲಾಕೆ ಸಮೇತ ಕಾರೊಳಗೆ ಹೊಕ್ಕಿದರೂ ಚಾಲಕ ಪಾರಾಗಿದ್ದಾರೆ.

ಅಪಘಾತದಿಂದ ವಿದ್ಯುತ್ ಕಂಬ ಮುರಿದಿದ್ದು ಮೆಸ್ಕಾಂ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇಂದು ಬೆಳಗ್ಗೆ ಕಾರನ್ನು ತೆರವುಗೊಳಿಸಲಾಗಿದೆ. ಮೆಸ್ಕಾಂ ಸಿಬ್ಬಂದಿ ಕ್ರೇನ್ ಮೂಲಕ ವಿದ್ಯುತ್ ಕಂಬ ತೆರವುಗೊಳಿಸಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಕಾರು ಮಾಲಕ ಮೆಸ್ಕಾಂಗೆ ದಂಡ ಪಾವತಿ ಮಾಡಲು ಒಪ್ಪಿಕೊಂಡಿದ್ದಾರಂತೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Edited By : Nagaraj Tulugeri
PublicNext

PublicNext

05/05/2024 04:43 pm

Cinque Terre

29.6 K

Cinque Terre

0

ಸಂಬಂಧಿತ ಸುದ್ದಿ